Advertisement

ಭರ್ಜರಿ ನಡೆದಿದೆ ಪ್ರೊಡಕ್ಷನ್‌ ನಂ.1 ಚಿತ್ರೀಕರಣ

01:39 PM Feb 23, 2018 | |

ನಾಲತವಾಡ: ಬಸವ ಸಾಗರ ಜಲಾಶಯದ ಬಳಿಯ ಮೀನು ಮರಿ ಸಾಕಣೆಯ ಕೇಂದ್ರದ ಪಕ್ಕದ ಕೆಬಿಜೆಎನ್‌ ಎಲ್‌ ಅರಣ್ಯ ಪ್ರದೇಶದಲ್ಲಿ ಪ್ರೋಡಕ್ಷನ್‌ ನಂ.1 ಚಲನಚಿತ್ರದ ಚಿತ್ರೀಕರಣ ನಾಲ್ಕೈದು ದಿನಗಳಿಂದ ಭರ್ಜರಿಯಾಗಿ ನಡೆದಿದೆ.

Advertisement

ತಾಳಿಕೋಟಿಯ ಖಾಸೇತೇಶ್ವರ ಪ್ರೋಡಕ್ಷನ್‌ ಹಾಗೂ ಸದ್ಗುರು ಎಂಟರ್‌ ಟೆನ್‌ಮೆಂಟ್‌ ಅವರ ತಾಳಿಕೋಟ ಪಟ್ಟಣದ ಸಾಗರ್‌ ಗಾವಡೆ ಹಾಗೂ ಶಹಜಹಾನ್‌, ಶಬನಾ ಗೊರಜಿನಾಳ ನಿರ್ಮಾಣದ ರಾಮು ಬಂಡೆಪ್ಪನಹಳ್ಳಿ ಮತ್ತು ಸಾಗರ್‌ ಗಾವಡೆ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕೊಪ್ಪಳ ಮೂಲದ ನಾಯಕ ಅಜಯ್‌ ಸೂರ್ಯದೀಪ್‌, ಬೆಂಗಳೂರಿನ ನಾಯಕಿ ಪವಿತ್ರಾ ಹೊಸ ಮುಖದ ತಾರಾಗಣ ಹೊಂದಿರುವ ಚಿತ್ರದ ಎಣಿಕೆಯಲ್ಲಿ ಚೇತನ್‌ ದರ್ಗಾ, ಆರ್‌.ಎಸ್‌. ಯಲ್ಲಾಲಿಂಗ, ಬಾಬು ಯಲಬುರ್ಗಾ, ಮಲ್ಲು ಪೇಟ್ಕರ್‌ ಗೋಕುಲ್‌ ಎಂಬ ಸಹನಿರ್ದೇಶನದ ಕರ್ನಾಟಕ ಮತ್ತು ತಮಿಳುನಾಡು ತಂಡವು ಪಟ್ಟಣದಲ್ಲೇ ವಾಸವಿದೆ. 

ಸಮೀಪದ ಬಸವಸಾಗರ ಜಲಾಶಯ ಪಕ್ಕದ ನಾಲತವಾಡ ವ್ಯಾಪ್ತಿಯ ಮೀನು ಮರಿ ಸಾಕಣೆ ಕೇಂದ್ರದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಚಿತ್ರಿಕರಣ ರಾತ್ರಿವೀಡಿ ನಡೆಯುತ್ತಿದೆ. ಪ್ರೌಢಾವಸ್ಥೆಯ ವಿದ್ಯಾಭ್ಯಾಸದ ವೇಳೆ ಮಕ್ಕಳು ದುಷ್ಟ ಚಟಗಳಿಗೆ ಹೊಂದಿಕೊಂಡು ಬದುಕಿನಲ್ಲಿ ತಂದುಕೊಳ್ಳಬಹುದಾದ ಗಂಡಾಂತರ ಘಟನೆಗಳು ಮತ್ತು ಸಮಾಜದ ಹಾಗೂ ಹೆತ್ತವರ ಮೇಲೆ ಬೀರುವ ಪರಿಣಾಮದ
ಕುರಿತು ಕಥೆ ಸಾರಾಂಶ ಒಳಗೊಂಡಿದೆ.

ಇಂದಿನಿಂದ “ರಂಗಬಿರಂಗಿ’ ಚಲನಚಿತ್ರ ಪ್ರದರ್ಶನ  
ಇಂಡಿ: ತಾಲೂಕಿನ ಉದಯೋನ್ಮುಖ ಚಲನಚಿತ್ರ ನಾಯಕ  ನಟನಾಗಿ ಗಡಿನಾಡಿನಲ್ಲಿ ಪ್ರದರ್ಶನ ನೀಡಲು ತಯಾರಾಗಿದ್ದು, ಫೆ.23 ರಂದು ಅಗರಖೇಡ ರಸ್ತೆಯ ಶ್ರೀನಿವಾಸ ಚಿತ್ರ ಮಂದಿರ ಸೇರಿದಂತೆ ರಾಜ್ಯಾದಂತ “ರಂಗಬಿರಂಗಿ’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
 
ಇಂಡಿ ನಗರದ ಪಂಚು ಅವರು ಈಗಾಗಲೇ ನಾಟಕ ರಂಗದಲ್ಲಿ ನಟಿಸಿದ್ದು, ಇದರಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು, ಬೆರಳಿಗೆ ಕೊರಳ್‌, ಭೂಮಿ ಎಂಬ ನಾಟಕಗಳಲ್ಲಿ ಅಭಿನಯಿಸಿದ್ದಾನೆ. ಗಿಟಾರ ವಾದನ, ಸುಗಮ ಸಂಗೀತ ಆಸಕ್ತಿ ಹೊಂದಿರುವ ಪಂಚು ನಾಟ್ಯದಲ್ಲಿಯೂ ಪ್ರವೀಣ. ನ್ಯಾಶನಲ್‌ ಸ್ಕೂಲ್‌ ಆಫ್‌ ಡ್ರಾಮಾ ಹಾಗೂ ರಂಗ ಪಯಣ ಬಳಗದ ಸದಸ್ಯರಾಗಿದ್ದಾರೆ. 

Advertisement

ಈ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಪಂಚು ಮೂಲ ಮಹಾರಾಷ್ಟ್ರದ ಮುಂಡೆವಾಡಿಯವರಾಗಿದ್ದು, ಸದ್ಯ ಇಂಡಿಯ ಸಿದ್ದಯ್ಯ ಶಿವರುದ್ರಯ್ಯ ಸ್ವಾಮಿ ಅವರ ದ್ವಿತೀಯ ಸುಪುತ್ರ ಪಂಚಾಕ್ಷರಿ (ಪಂಚು) ನಾಯಕ ನಟನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾನೆ.

ಉತ್ತರ ಕರ್ನಾಟಕ ಗಡಿ ಭಾಗದ ಇಂಡಿ ಮಣ್ಣಿನ ಕಲಾವಿದ ಪಂಚಾಕ್ಷರಿ ಹಾಗೂ ರಂಗಬಿರಂಗಿ ಚಲನಚಿತ್ರದ ಎಲ್ಲ ಕಲಾವಿದರ ಚಿತ್ರ ನೋಡಿ ಆಶೀರ್ವದಿಸಬೇಕು ಎಂದು ನಟ ಪಂಚುನ ತಂದೆ ಸಿದ್ದಯ್ಯ ಎಸ್‌. ಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next