Advertisement

ರಸ್ತೆ ಸುರಕ್ಷತೆ ಮಹತ್ವ ಸಾರಿದ ವಾಕಥಾನ್‌

04:57 PM Jan 22, 2021 | Team Udayavani |

ಬಳ್ಳಾರಿ: 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್‌ ವತಿಯಿಂದ ಗುರುವಾರ ವಾಕ್‌ಥಾನ್‌ ನಡೆಯಿತು. ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಆರಂಭವಾದ ವಾಕ್‌ಥಾನ್‌ ಗಡಗಿ ಚನ್ನಪ್ಪ ವೃತ್ತದ ಮಾರ್ಗವಾಗಿ ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಪೊಲೀಸ್‌ ಠಾಣೆ ಮಾರ್ಗವಾಗಿ ಎಚ್‌.ಆರ್‌.ಗವಿಯಪ್ಪ ವೃತ್ತದವರೆಗೆ ನಡೆಯಿತು. ಸಾರ್ವಜನಿಕರು ಹಾಗೂ ಪೊಲೀಸ್‌ ಇಲಾಖೆಯ ಅ ಧಿಕಾರಿಗಳು ಮತ್ತು ಪೊಲೀಸರು ಈ ವಾಕ್‌ಥಾನದಲ್ಲಿ ಭಾಗವಹಿಸಿದ್ದರು. ವಾಕ್‌ಥಾನ ಸಂದರ್ಭದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಫಲಕಗಳು ಹಾಗೂ ಸಂದೇಶಗಳು ಗಮನ ಸೆಳೆದವು.

Advertisement

ಇದನ್ನೂ ಓದಿ : ಬೀದರ ಜಿಲ್ಲೆ ಸಮಗ್ರ ಅಭಿವೃದ್ಧಿಗಾಗಿ ಸಿಎಂ ಭೇಟಿ

ವಾಕ್‌ಥಾನ್‌ ನಂತರ ಎಚ್‌.ಆರ್‌.ಗವಿಯಪ್ಪ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಸೋಮಶೇಖರರೆಡ್ಡಿ, ಪ್ರತಿಯೊಬ್ಬರ ಜೀವ ಅಮೂಲ್ಯ. ತಮ್ಮ ಹಿಂದೆ ತಮ್ಮನ್ನೇ ನಂಬಿಕೊಂಡ ಕುಟುಂಬವಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ  ವಹಿಸದೇ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಬಳ್ಳಾರಿ ನಗರದಲ್ಲಿ ಪ್ರತಿ ವರ್ಷ 1 ಸಾವಿರ ಅಪಘಾತಗಳಾಗುತ್ತಿದ್ದು, ಅವುಗಳಲ್ಲಿ 300 ಜನರು ಸಾವಿಗೀಡಾಗುತ್ತಿದ್ದಾರೆ. ಇದು ದೊಡ್ಡ ದುರಂತ. ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಳೆದ ಎರಡು ದಿನಗಳ ಹಿಂದೆ ಸಾರ್ವಜನಿಕರೊಬ್ಬರು ಹೆಲ್ಮೆಟ್‌ ಹಾಕಿಕೊಳ್ಳದ್ದರಿಂದ ಪೊಲೀಸರು ಹಿಡಿದಿದ್ದ ಹಿನ್ನೆಲೆಯಲ್ಲಿ ಫೋನ್‌ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ ಶಾಸಕ ಸೋಮಶೇಖರರೆಡ್ಡಿ ಅವರು “ಹೆಲ್ಮೆಟ್‌ ಧರಿಸದ ಕಾರಣಕ್ಕೆ ಯಾರ ವಿಷಯದಲ್ಲಾದರೂ ಸ್ವತಃ ನಾನೇ ಫೋನ್‌ ಮಾಡಿದರೂ ದಂಡ ವಿ ಧಿಸದೇ ಬಿಡಬೇಡಿ, ಸವಾರರಿಗೆ ತಿಳಿಸಿ ಶಾಸಕರೇ ಹೇಳಿದ್ದಾರೆ, ದಂಡ ವಿ ಧಿಸಲು ಅಂತೇಳಿ’ ಎಂದು ಪೊಲೀಸರಿಗೆ ತಿಳಿಸಿದರು.

ರಸ್ತೆ ಸುರಕ್ಷತೆಗೆ ಸಂಬಂಧಿ ಸಿದ ಪ್ರತಿಜ್ಞಾವಿಧಿ ಬೋಧಿ ಸಿದ ಎಸ್‌ಪಿ ಸೈದುಲು ಅಡಾವತ್‌ ಅವರು, ರಸ್ತೆ ಸುರಕ್ಷತೆಯಲ್ಲಿ ನಿಷ್ಕಾಳಜಿ ತೋರದೇ ಪ್ರತಿಯೊಬ್ಬರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ತಪ್ಪದೇ ಪಾಲಿಸುವುದರ ಮೂಲಕ ತಮ್ಮ ಅಮೂಲ್ಯ ಜೀವ ಕಾಪಾಡಿಕೊಳ್ಳುವುದರ ಜತೆಗೆ ಇನ್ನೊಬ್ಬರ ಜೀವವೂ ಉಳಿಸಬೇಕು. ರಸ್ತೆ ಸುರಕ್ಷತಾ ನಿಯಮಗಳ ಕಡ್ಡಾಯ ಪಾಲನೆಗೆ ಸಂಬಂಧಿ ಸಿದಂತೆ ಅನೇಕ ಸಲಹೆ ಸೂಚನೆ ನೀಡಿದರು.

Advertisement

ಹೆಚ್ಚುವರಿ ಎಸ್‌ಪಿ ಬಿ.ಎನ್‌.ಲಾವಣ್ಯ ಮಾತನಾಡಿ, ರಸ್ತೆ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದರು.

ಡಿವೈಎಸ್ಪಿಗಳಾದ ರಮೇಶ, ಸತ್ಯನಾರಾಯಣ, ಆರ್‌ಟಿಒ ಶೇಖರ್‌ ಸೇರಿದಂತೆ ಪೊಲೀಸ್‌ ಇಲಾಖೆಯ ಅಧಿ ಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

ಇದನ್ನೂ ಓದಿ :  ಹುಣಸೋಡು ದುರ್ಘಟನೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಚಿವ ಮುರುಗೇಶ್ ನಿರಾಣಿ

Advertisement

Udayavani is now on Telegram. Click here to join our channel and stay updated with the latest news.

Next