Advertisement
ಅವುಗಳಲ್ಲೊಂದು ಪುನ:ಶ್ಚೇತನಕ್ಕೆ ಕಾಯುತ್ತಿರುವ ಮಧೂರು ಪರಕ್ಕಿಲ ಕೆರೆ. ಈ ಕೆರೆಗೆ ಪುನ:ಶ್ಚೇತನ ನೀಡಿದ್ದಲ್ಲಿ ಕೃಷಿಕರ ಪಾಲಿಗೆ ವರದಾನವಾಗಲಿದೆ. ಕೆರೆಗೆ ಪುನ:ಶ್ಚೇತನ ಲಭಿಸಿಬೇಕಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕು.
Related Articles
Advertisement
ಕಾಯಕಲ್ಪ ಬೇಕು : ಮಧೂರು ಪಂಚಾಯತ್‌ನ ಜನರ ಜೀವನಾಡಿಯಾಗಿರುವ ಪರಕ್ಕಿಲ ಕೆರೆಯನ್ನು ಸಂರಕ್ಷಿಸಲು ಕಾಯಕಲ್ಪ ನಡೆಯಬೇಕು. ಶತಮಾನ ಕಂಡಿರುವ ಪರಕ್ಕಿಲ ಕೆರೆಯಲ್ಲಿ ತುಂಬಿಕೊಂಡಿರುವ ಹೂಳು ಎತ್ತುವುದರಿಂದ ಕೆರೆಯಲ್ಲಿ ನೀರು ತುಂಬಿ ತುಳಕಲಿದೆ. ಇದೀಗ ಹೂಳು ತುಂಬಿಕೊಂಡಿರುವುದರಿಂದ ನೀರಿನ ಸಂಗ್ರಹವೂ ಕುಸಿದಿದೆ. ನಾಲ್ಕೂ ಬದಿಯಿಂದ ಆವರಣ ಗೋಡೆ ನಿರ್ಮಿಸುವುದರ ಮೂಲಕ ಮಳೆ ನೀರಿನೊಂದಿಗೆ ಹರಿದು ಬರುವ ಹೂಳು ತುಂಬುವುದನ್ನು ತಡೆಗಟ್ಟಬಹುದು.
ಹೂಳು ತುಂಬುವುದನ್ನು ತಡೆಗಟ್ಟುವುದರಿಂದ ವರ್ಷ ಪೂರ್ತಿ ನೀರು ಸಂರಕ್ಷಿಸಬಹುದು. ಇದು ಕೃಷಿಕರಿಗೆ ಮತ್ತು ಸ್ಥಳೀಯರಿಗೆ ವರದಾನವಾಗಬಹುದು.
ಮದಗ ಸಂರಕ್ಷಣೆ : ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳು, ಮದಗಗಳು ಇವೆ. ಅವುಗಳಲ್ಲಿ ಹಲವು ಈಗಾಗಲೇ ಶಿಥಿಲಾವಸ್ಥೆಗೆ ತಲುಪಿದೆ. ಇವುಗಳಲ್ಲಿ ಪ್ರಮುಖ ಮದಗಗಳಾದ ಪೈವಳಿಕೆ ಬಾಯಿಕಟ್ಟೆ, ಪುತ್ತಿಗೆಯ ಅನೋಡಿಪಳ್ಳ, ಎಣ್ಮಕಜೆಯ ಬೆದ್ರಂಪಳ್ಳ ಮೊದಲಾದವುಗಳನ್ನು ಸಂರಕ್ಷಿಸಬೇಕಾಗಿದೆ.
ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮದಗಗಳನ್ನು ಸಂರಕ್ಷಿಸಲು ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರನ್ನು ಬಳಸಿಕೊಳ್ಳಬೇಕೆಂದು ಸಾರ್ವತ್ರಿಕವಾಗಿ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಕಾರ್ಮಿಕರನ್ನು ಜಲ ಸಂರಕ್ಷಣೆಯ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕೆಂದೂ ಆಗ್ರಹಿಸುತ್ತಿದ್ದಾರೆ.
ಇನ್ನೂ ಸಾಕಾರಗೊಳ್ಳದ ಅಭಿವೃದ್ಧಿ ಯೋಜನೆ : ವರ್ಷಪೂರ್ತಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳ ಪರಕ್ಕಿಲ ಕೆರೆಯನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯತ್ ಯೋಜನೆ ಹಾಕಿಕೊಂಡಿತ್ತು. ಆದರೆ ಈ ವರೆಗೂ ಜಿಲ್ಲಾ ಪಂಚಾಯತ್ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಥಮಿಕ ಪ್ರಕ್ರಿಯೆಯನ್ನೂ ಆರಂಭಿಸಿಲ್ಲ.ಮಧೂರು ಗ್ರಾಮ ಪಂಚಾಯತ್ ಪರಕ್ಕಿಲ ಕೆರೆಯನ್ನು ಅಭಿವೃದ್ಧಿ ಪಡಿಸುವಂತೆ ನಿರಂತರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಲೇ ಬಂದಿದೆ. ಆದರೆ ಮನವಿಗೆ ಸ್ಪಂದನೆ ಲಭಿಸಿಲ್ಲ. ಈ ಕಾರಣದಿಂದಾಗಿ ಪರಕ್ಕಿಲ ಕೆರೆ ಅವನತಿಗೆ ಸರಿಯುತ್ತಿದೆ. ಸಂಪೂರ್ಣ ಅವನತಿಗೆ ಸರಿಯುವ ಮುನ್ನವೇ ಕೆರೆಗೆ ಪುನ:ಶ್ಚೇತನ ನೀಡಲು ಮುಂದಾದರೆ ಮಧೂರು ಗ್ರಾಮ ಪಂಚಾಯತ್‌ನಲ್ಲಿ ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ಲಭಿಸಬಹುದುಕಾನೂನನ್ನು ಕಡ್ಡಾಯಗೊಳಿಸಲಾಗಿದೆ. ಜಲಸಂರಕ್ಷಣೆಗೆ ಆದ್ಯತೆ
ನೀಪರಕ್ಕಿಲ ಕೆರೆಯ ಅಭಿವೃದ್ಧಿಗೆ ಪಂಚಾಯತ್‌ನಿಂದ ನಿರಂತರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಪಂಚಾಯತ್‌ಗೆ ಸೀಮಿತ ಅನುದಾನ ಇರುವುದರಿಂದ ಈ ಕೆರೆ ಅಭಿವೃದ್ಧಿ ಹೊಣೆಯನ್ನು ಕಿರು ನೀರಾವರಿ ಇಲಾಖೆ ಅಥವಾ ಜಿಲ್ಲಾ ಪಂಚಾಯತ್ ವಹಿಸಿಕೊಳ್ಳಬೇಕಾದುದು ಅನಿವಾರ್ಯ. ಈ ಬಗ್ಗೆ ಎರಡು ವರ್ಷಗಳಿಂದ ಮನವಿ ಸಲ್ಲಿಸಿದ್ದೇವೆ. ಕೆರೆಯ ನೀರನ್ನು ಕೃಷಿಗೆ ಬಳಸಿ ಜಲಸಂರಕ್ಷಣೆಗೆ ಆದ್ಯತೆ ನೀಡಲಾಗುವುದು.
ಮಾಲತಿ ಸುರೇಶ್, ಅಧ್ಯಕ್ಷೆ ಮಧೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಪ್ಯಾಕೇಜ್
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಜಲ ಸಂರಕ್ಷಣೆ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು.
ಜಲಾಶಯ ಕಡಿಮೆಯಾದ ಐದು ನದಿಗಳ ಮತ್ತು ನದಿ ತೀರ ಪ್ರದೇಶಗಳಲ್ಲಿ ಜಲ ಸಂಗ್ರಹ ಪ್ರಕ್ರಿಯೆಯನ್ನು ಪ್ರಥಮ ಹಂತದಲ್ಲಿ ಜಾರಿಗೊಳಿಸಲಾಗುವುದು.
ಕೊಳವೆ ಬಾವಿಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ ತೆರೆದ ಬಾವಿಗಳ ಸಾಧ್ಯತೆಯನ್ನು ಹೆಚ್ಚಿಸಲಾಗುವುದು.
ಕೃಷಿ ಪ್ರದೇಶಗಳನ್ನು ಹೆಚ್ಚಿಸಿ ಅಲ್ಲಿಗೂ ನೀರು ತಲುಪಿಸಲಾಗುವುದು.
ಡಾ| ಡಿ.ಸಜಿತ್‌ಬಾಬು, ಜಿಲ್ಲಾಧಿಕಾರಿ – ಪ್ರದೀಪ್ ಬೇಕಲ್