Advertisement
ಶ್ಮಶಾನ ಸುತ್ತಮುತ್ತಲ ಹತ್ತೂರಿನ ಗ್ರಾಮಗಳ ಜನತೆಗೆ ಶವ ಸಂಸ್ಕಾರಕ್ಕೆ ಬಹಳ ಉಪಯುಕ್ತವಾಗಿತ್ತು. ಅನಂತರದಲ್ಲಿ ನಿರ್ವಹಣೆಯಿಲ್ಲದೆ ಸೊರಗಿತ್ತು. ಪಾಳು ಬಿದ್ದ ಶ್ಮಶಾನವನ್ನು ಸುಸ್ಥಿತಿಗೆ ತರಲು ಕುಕ್ಕುಂದೂರು ಸ್ಥಳೀಯಾಡಳಿತ ಅನು ದಾನ ಮೀಸಲಿರಿಸಿದ್ದರೂ, ಅನುದಾನ ಸಾಕಾಗದೆ ಶೆಡ್ ಸಹಿತ ಕೆಲವು ಕೆಲಸಗಳು ಮಾತ್ರ ಆಗಿದ್ದವು. ಕಳೆದ ಕೆಲವು ಸಮಯಗಳಿಂದ ಶ್ಮಶಾನ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿಲ್ಲ. ಮೂಲ ಸೌಕರ್ಯವಿಲ್ಲದೆ. ಶವವನ್ನು ಶ್ಮಶಾನ ತನಕ ತಂದು ವಾಪಸ್ ಕೊಂಡು ಹೋಗುವಂತಹ ಪ್ರಸಂಗ ಕೂಡ ಎದುರಾಗುತ್ತಿತ್ತು. ಶ್ಮಶಾನ ಕೊರತೆ ವಿಚಾರವಾಗಿ ಗ್ರಾ.ಪಂ. ಸಭೆ, ಸಾಮಾನ್ಯ ಸಭೆಗಳಲ್ಲಿ ಈ ಕುರಿತು ಪ್ರಶ್ನೆ, ಚರ್ಚೆಗಳು ನಡೆಯುತ್ತಿದ್ದರೂ ಅನುದಾನ ಹರಿದು ಬಾರದೇ ಇರುವುದರಿಂದ ಚರ್ಚೆ, ಮಾತುಕತೆಗೆ ಸೀಮಿತವಾಗಿತ್ತು.
ಸೆ. 21ರಿಂದ ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುವ ಗುರಿ ಇಟ್ಟುಕೊಂಡು ರುದ್ರಭೂಮಿಯನ್ನು ಸುಸಜ್ಜಿತ ಗೊಳಿಸುವ ಕಾರ್ಯ ನಡೆಯುತ್ತಿದೆ. ಸುಮಾರು 50 ಸಾವಿರ ರೂ. ವೆಚ್ಚದ ಕೆಲಸಗಳು ಈಗಾಗಲೇ ನಡೆದಿವೆ. ಇನ್ನು ಮೇಲ್ಛಾವಣಿ, ಇಂಟರ್‌ಲಾಕ್, ಉಳಿದ ಭಾಗಕ್ಕೆ ಕಾಂಪೌಂಡ್, ಗಾರ್ಡನ್, ನೀರು ಸಹಿತ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸುತ್ತಿದ್ದಾರೆ.
Related Articles
ತಾಲೂಕಿನ ಅತೀ ದೊಡ್ಡ ಗ್ರಾ.ಪಂ. ಹಾಗೂ ಹೆಚ್ಚು ಸದಸ್ಯ ಸ್ಥಾನಗಳನ್ನು ಹೊಂದಿರುವ ನಗರಕ್ಕೆ ಹತ್ತಿರವಾಗಿರುವ ಕುಕ್ಕುಂದೂರು ಗ್ರಾಮ ಪಂಚಾಯತ್‌ವ್ಯಾಪ್ತಿಯಲ್ಲಿ ಶವಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ಶ್ಮಶಾನ ಮುಚ್ಚಿರುವ ಬಗ್ಗೆ ಇತ್ತೀಚೆಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಗೊಂಡಿತ್ತು. ಬಳಿಕ ಈ ವಿಚಾರ ತಾ.ಪಂ. ಸಾಮಾನ್ಯ ಸಭೆಯಲ್ಲಿ ತಾ.ಪಂ. ಸದಸ್ಯ ಅಶೋಕ್ ಶೆಟ್ಟಿ ಪ್ರಸ್ತಾವಿಸಿದ್ದರು.
Advertisement
ಸ್ವಚ್ಛತೆಗೆ ಆದ್ಯತೆಕುಕ್ಕುಂದೂರಿನಲ್ಲಿ ಶ್ಮಶಾನವನ್ನು ಸುಸಜ್ಜಿತಗೊಳಿಸುವ ಬಗ್ಗೆ ಚರ್ಚೆ ನಡೆಸಿ, ಸಮಿತಿ ರಚಿಸಿಕೊಂಡಿದ್ದೇವೆ. ದಾನಿಗಳು, ಇಲಾಖೆ, ಜನಪ್ರತಿನಿಧಿಗಳ ಎಲ್ಲರ ಸಹಕಾರ ಪಡೆದು ಸುಸಜ್ಜಿತವಾಗಿ ಪೂರ್ಣಗೊಳಿಸುತ್ತೇವೆ. ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಿ ನಿರ್ವಹಣೆ ಮಾಡುತ್ತೇವೆ.
-ರಾಜೇಶ್ ರಾವ್, ಮುಕ್ತಿಧಾಮ ಅಭಿವೃದ್ಧಿ ಸೇವಾ ಸಮಿತಿ