Advertisement

ಬಲಿಗಾಗಿ ಕಾದಿವೆ ಕೆರೆ ಕಟ್ಟೆ

04:47 PM Dec 10, 2018 | Team Udayavani |

ಮಾಗಡಿ: ತಾಲೂಕಿನಲ್ಲಿರುವ ಬಹುತೇಕ ಕೆರೆ, ಕಟ್ಟೆಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಕೂಡಲೇ ಪಿಡಬ್ಲ್ಯೂಡಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಡೆಗೋಡೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Advertisement

ಮಾಗಡಿ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಪ್ರತಿದಿನ ಸಾವಿರಾರೂ ವಾಹನಗಳು ಸಂಚರಿ ಸುತ್ತವೆ. ಬೆಂಗಳೂರು ಕಡೆಯಿಂದ ಹುಲಿ ಯೂರುದುರ್ಗ, ಕುಣಿಗಲ್‌ ಸೇರಿದಂತೆ ಹಲವು ಪಟ್ಟಣಗಳನ್ನು ಬೆಸೆಯುವ ರಸ್ತೆ ಇದಾಗಿದೆ. ಅಲ್ಲದೇ ರಜಾ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಇರುವುದ ರಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಕಡೆಗಳಿಗೆ ತೆರಳುವವರು ಹೆಚ್ಚಾಗಿ ಮಾಗಡಿ ಬೆಂಗಳೂರು ರಸ್ತೆ ಬಳಸುತ್ತಾರೆ. 

ರಸ್ತೆ ಪಕ್ಕದಲ್ಲೇ ಇದೆ ಕಟ್ಟೆ: ಮಾಗಡಿಯ ತಿರುಮಲೆ ಹೆಬ್ಟಾಗಿ ಲಿನಿಂದ ಕೂಗಳತೆ ದೂರದಲ್ಲಿರುವ ಅಂಬಾ ರಯ್ಯನ ಕಟ್ಟೆ ರಸ್ತೆ ಪಕ್ಕದಲ್ಲಿಯೇ ಇದೆ. ಇದಕ್ಕೆ ತಡೆಗೋಡೆ ನಿರ್ಮಿಸಿಲ್ಲ, ಈ ಕಟ್ಟೆಯ ಬಳಿ ತಿರುವು ಹಾಗೂ ಇಳಿಜಾರು ಇದೆ. ಮಾಗಡಿ ಯಿಂದ ವೇಗವಾಗಿ ಬರುವ ವಾಹನಗಳ ಚಾಲಕರು
ಸ್ವಲ್ಪ ಯಾಮಾರಿದರೂ ವಾಹನ ನೇರವಾಗಿ ಕಟ್ಟೆಗೆ ಉರುಳಲಿದೆ. ಈ ಕಟ್ಟೆಗೆ ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ತನ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಡೆಗೋಡೆ ಇಲ್ಲದ ಕೆರೆಗಳು: ತಾಲೂಕಿನ ತಗ್ಗೀಕುಪ್ಪೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ತಿರುವಿನಲ್ಲಿ ಒಂದು ಕಟ್ಟೆ ಇದೆ. ಇದಕ್ಕೂ ತಡೆಗೋಡೆ ನಿರ್ಮಿಸಿಲ್ಲ. ಹೇಳಿಗೆಹಳ್ಳಿ ಕಾಲೋನಿಗೆ ತೆರಳುವ ರಸ್ತೆಯ ಬದಿಯ ಲ್ಲಿರುವ ಕೆರೆಗೂ ತಡೆಗೋಡೆ ನಿರ್ಮಿಸಿಲ್ಲ. ಪಟ್ಟಣದಿಂದ ಮಾಡಬಾಳ್‌ಗೆ ತೆರಳುವ ರಸ್ತೆಯ ಪಕ್ಕದಲ್ಲಿರುವ ಭರ್ಗಾವತಿ ಕೆರೆಗೂ ಯಾವುದೇ ತಡೆಯಿಲ್ಲ. ಕಲ್ಯಾದಿಂದ ಶ್ರೀಪತಿಹಳ್ಳಿಗೆ ತೆರಳುವ ರಸ್ತೆ ಪಕ್ಕದಲ್ಲಿರುವ ಕೆರೆ ಅಪಾಯಕ್ಕೆ ಆಹ್ವಾನಿಸುತ್ತಿದೆ. ಈ ಎಲ್ಲಾ ಕಡೆಗಳಲ್ಲಿ ರಸ್ತೆ ಪಕ್ಕದಲ್ಲಿರುವ ಕೆರೆ, ಕಟ್ಟೆಗಳಿಗೆ ತಡೆಗೋಡೆಯನ್ನು ನಿರ್ಮಿಸಬೇಕಿದೆ. 

ದುರಂತ ನಡೆದ್ರೂ ಕ್ರಮಕೈಗೊಂಡಿಲ್ಲ: ಇತ್ತೀಚೆಗೆ ಮಂಡ್ಯದ ಪಾಂಡವಪುರ ತಾಲೂಕಿ ನಲ್ಲಿ ವಿಸಿ ನಾಲೆಗೆ ಬಸ್‌ ಬಿದ್ದು ಮಕ್ಕಳು, ಮಹಿಳೆಯರು ಸೇರಿ 30 ಮಂದಿ ಮೃತ ಪಟ್ಟಿದ್ದರು. ನಾಲೆಗೆ ತಡೆಗೋಡೆ ನಿರ್ಮಿಸಿದ್ದರೆ ಅಷ್ಟು ಮಂದಿ ಬದುಕುವ ಸಾಧ್ಯತೆ ಇತ್ತು. ಈ ಘಟನೆ ನಂತರವಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಪಕ್ಕದಲ್ಲಿರುವ ಕೆರೆ ಕಟ್ಟೆ, ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

Advertisement

ಕಳೆದ ವಾರವಷ್ಟೇ ಮಂಡ್ಯ ಜಿಲ್ಲೆಯ ಕನಗನಮರಡಿ ಗ್ರಾಮದಲ್ಲಿ ಬಸ್‌ ನಾಲೆಗೆ ಬಿದ್ದು, 30 ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿಯ ಇಂತಹ ಘಟನೆಗಳು ರಾಜ್ಯದ ವಿವಿಧೆಡೆ ಬಹಳಷ್ಟು ನಡೆದಿವೆ. ಆದರೂ ಅಧಿಕಾರಿಗಳು ಪಾಠ ಕಲಿತ್ತಿಲ್ಲ. ಕೂಡಲೇ ರಸ್ತೆ ಪಕ್ಕದಲ್ಲಿರುವ ಕೆರೆಗಳ ಏರಿಗೆ ತಡೆಗೋಡೆ ನಿರ್ಮಿಸಿ ಮುಂದೆ ಸಂಭವಿಸಬಹುದಾದ ಅಪಾಯ ತಪ್ಪಿಸಬೇಕು.
 ಅರುಂಧತಿ ಚಿಕ್ಕಣ್ಣ, ಹನುಮಾಪುರ.

ಮಾಗಡಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿರುವ ಅಂಬಾರಯ್ಯನ ಕಟ್ಟೆಗೆ ತಡೆಗೋಡೆ ಇಲ್ಲ. ಈಗಾಗಲೇ ವಾಹನಗಳು ಈ ಕಟ್ಟೆಗೆ ಉರುಳಿ ಬಿದ್ದಿವೆ. ಅದೃಷ್ಟವಶಾತ್‌ ಕಟ್ಟೆಯಲ್ಲಿ ನೀರಿಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ರಜಾ ದಿನಗಳಲ್ಲಿ ಈ ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಚಾಲಕ ಅಜಾಗರೂಕತೆಯಿಂದ ವಾಹನ ಓಡಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಡೆಗೋಡೆ ನಿರ್ಮಿಸಬೇಕು.
 ಡಿ.ಜಿ. ಕುಮಾರ್‌, ದಂಡಿಗೆಪುರ 

Advertisement

Udayavani is now on Telegram. Click here to join our channel and stay updated with the latest news.

Next