Advertisement
ಹಾಲ್ಕುರಿಕೆ ಗ್ರಾಮದ ಬಳಿಯ ಶುಂಠಿ ಕ್ಯಾಂಪ್‌ನಲ್ಲಿ ಊಟ, ವಸತಿ ನೀಡಿ ಕೂಲಿ ಹಣ ಇಲ್ಲದೇ ಜೀತ ಹಾಗೂ ಒತ್ತೆಯಾಳು ರೀತಿಯಲ್ಲಿಯೇ ದುಡಿಯುತ್ತಿದ್ದ 30 ಕೂಲಿ ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದಾರೆ.
ಹೊರ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯ 30 ಜನ ಕೂಲಿ ಕಾರ್ಮಿಕರನ್ನು ಈ ಶುಂಠಿ ಕ್ಯಾಂಪ್‌ನಲ್ಲಿ ಕೆಲಸಕ್ಕಾಗಿ ಸೈದರಹಳ್ಳಿ ಪುಟ್ಟರಾಜು ಎಂಬಾತ ಕರೆತಂದಿದ್ದ. ಆದರೆ ಅವರನ್ನು ಊರಿಗೆ ಕಳುಹಿಸದೇ ಕೂಲಿಯೂ ಕೊಡದೇ ದುಡಿಸಿಕೊಳ್ಳಲಾಗುತ್ತಿತ್ತು. ಕಾರ್ಮಿಕರು ಕೆಲಸ ಮಾಡದೇ ತಮ್ಮ ಊರಿಗೆ ಹೋಗಲು ಪ್ರಯತ್ನಿಸಿದರೆ ಕಾವಲುಗಾರರು ದೊಣ್ಣೆಗಳಿಂದ ಹಲ್ಲೆ ಮಾಡುತ್ತಿದ್ದರು. ಇದೇ ಕಾರ್ಮಿಕರನ್ನು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ದುಡಿಸಿಕೊಳ್ಳಲಾಗಿತ್ತು. ಅಲ್ಲಿಂದ ಬೇರೆ ಬೇರೆ ಶುಂಠಿ ಕ್ಯಾಂಪ್‌ಗ್ಳಿಗೆ ಸಾಗಾಟ ಮಾಡುತ್ತಾರೆ ಎಂದು ಕೂಲಿಗಾಗಿ ಕರೆದುಕೊಂಡು ಬರುವ ಏಜೆಂಟರುಗಳ ವಿರುದ್ಧ ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.