ಬೆಂಗಳೂರು: ಡ್ನೂಕ್ಸ್ ಬ್ರಾಂಡ್ ಖ್ಯಾತಿಯ ಕ್ರೀಮ್ ವೇಫರ್ ಉತ್ಪನ್ನಗಳ ತಯಾರಕ ರವಿ ಫುಡ್ಸ್ ಪ್ರೈ.ಲಿ., ಈಗ ಮಾರುಕಟ್ಟೆಯಲ್ಲಿರುವ ತನ್ನ ಉತ್ಪನ್ನಗಳ ಸಾಲಿಗೆ ನೈಸರ್ಗಿಕ ಹಣ್ಣುಗಳಿಂದ ತಯಾರಿಸಿದ ಹೊಸ “ಡ್ನೂಕ್ಸ್ ವೇಫಿ’ಯನ್ನು ಸೇರಿಸಿದೆ.
ನೂತನ ವೇಫಿಯನ್ನು ಬಿಡುಗಡೆ ಮಾಡಿದ ರವಿ ಫುಡ್ಸ್ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ಅಗರ್ವಾಲ್ ಮಾತನಾಡಿ, ಈ ಕ್ರೀಮ್ ವೇಫರ್ಗಳನ್ನು ಅನಾನಸ್, ಸ್ಟ್ರಾಬೆರ್ರಿ, ಮಾವು ಮತ್ತು ಕಿತ್ತಳೆ ಹಣ್ಣುಗಳ ವಿವಿಧ ಸ್ವಾದಗಳಲ್ಲಿ ತಯಾರಿಸಲಾಗಿದೆ.
ಒಟ್ಟಾರೆ ಸ್ವಾದಿಷ್ಟ, ರುಚಿಕರ ಹಾಗೂ ಸುವಾಸನೆ ಭರಿತ ವೇಫಿ ವೇಫರ್ ಇದಾಗಿದೆ. ವೇಫರ್ ಪ್ರಿಯರಿಗೆ ಇಷ್ಟವಾಗುವ ರೀತಿಯಲ್ಲಿ ಉತ್ತಮ ಉತ್ಪನ್ನ ಹೊರತರುವಲ್ಲಿ ನಮ್ಮ ಸಂಸ್ಥೆ ಸದಾ ಮುಂದಿದೆ ಎಂದರು.
ಡ್ನೂಕ್ಸ್ ಇಂಡಿಯಾ ಸಿಇಒ ಅರವಿಂದ್ ಕುಮಾರ್ ಮಾತನಾಡಿ, ಇತ್ತೀಚೆಗೆ ಬೆಣ್ಣೆ ಸ್ವಾದದ ವೇಫಿಯನ್ನು ಪರಿಚಯಿಸಿದ್ದೆವು. ಈಗ ಇದುವರೆಗೆ ಮಾರುಕಟ್ಟೆಯಲ್ಲಿ ಯಾರೂ ಇಂತಹ ರುಚಿಕರ ಹಾಗೂ ಬಾಯಲ್ಲಿ ನೀರೂರಿಸುವ ವೇಫರ್ ಅನ್ನು ಬಿಡುಗಡೆ ಮಾಡಿಲ್ಲ.
ಈ ವೇಫರ್ ಮಕ್ಕಳ ಮತ್ತು ಹದಿಹರೆಯದವರ ಗಮನ ಸೆಳೆಯುವುದಲ್ಲದೆ, ದಕ್ಷಿಣ ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲಿದೆ. ಆ ಮೂಲಕ ವೇಫರ್ ಕ್ಷೇತ್ರದಲ್ಲಿ ಡ್ನೂಕ್ಸ್ ವೇಫಿ ಅಗ್ರಸ್ಥಾನಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.