ವಾಡಿ : ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನೋರ್ವ ಆಕೆಯ ಕುಟುಂಬಸ್ಥರಿಂದಲೇ ಕೊಲೆಯಾದ ಘಟನೆ ಬುಧವಾರ ಸಂಜೆ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.
ಪಟ್ಟಣದ ಭೀಮನಗರ ಬಡಾವಣೆಯ ನಿವಾಸಿ ವಿಜಯ ಕಾಂಬಳೆ (25) ಕೋಲೆಗೀಡಾದ ಯುವಕ. ಸಹೋದರಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಯುವತಿಯ ಸಹೋದರರು ವಿಜಯ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಬುಧವಾರ ಸಂಜೆ ವಾರ್ಡ್ 16ರ ರೈಲ್ವೆ ತಡೆಗೋಡೆ ಹತ್ತಿರ ಯುವಕನನ್ನು ತಡೆದು ಜಗಳ ತೆಗೆದಿದ್ದಾರೆ.
ಚಾಕು, ಚೂರಿ, ಕಲ್ಲು, ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿದ್ದಾರೆ. ಯುವಕನ ಉಸಿರು ನಿಂತಿರುವುದನ್ನು ತಿಳಿದ ತಕ್ಷಣ ಹಂತಕರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ಮಾರಕಾಸ್ತ್ರಗಳ ದಾಳಿಯಿಂದ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದು, ಘಟನಾ ಸ್ಥಳದಲ್ಲಿ ರಕ್ತ ಮಡುಗಟ್ಟಿದೆ. ಆರೋಪಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ವಾಡಿ ಠಾಣೆಯ ಪಿಎಸ್ ಐ ಮಹಾಂತೇಶ ಜೆ.ಪಾಟೀಲ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
Related Articles
ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಹಂತಕರ ಬಂಧನದಿಂದ ಮಾತ್ರ ಕೊಲೆಗೆ ನಿಖರವಾದ ಕಾರಣ ತಿಳಿದು ಬರಲಿದೆ.
ಇದನ್ನೂ ಓದಿ : ಒಡಿಶಾದಲ್ಲಿ ರಸ್ತೆ ಅಪಘಾತ: ಪಶ್ಚಿಮ ಬಂಗಾಳದ 6 ಮಂದಿ ಸಾವು