Advertisement

ಉದ್ದೀಪನ: ಸ್ವಚ್ಛ  ಕ್ರೀಡಾ ಅಭಿಯಾನಕ್ಕೆ ಹಿನ್ನಡೆ

06:00 AM Jul 25, 2018 | Team Udayavani |

ಹೊಸದಿಲ್ಲಿ: ಉದ್ದೀಪನ ದ್ರವ್ಯಗಳಿಲ್ಲದ ಸ್ವಚ್ಛ ಕ್ರೀಡೆಯ ಭಾರತದ ಅಭಿಯಾನ ಕೊಂಚ ಹಿನ್ನಡೆ ಕಂಡಿದೆ. 2017ರಲ್ಲಿ ನಾಡಾ ನಡೆಸಿದ 3,174 ಮಾದರಿಗಳ ಪರೀಕ್ಷೆಯಲ್ಲಿ 71 ಕ್ರೀಡಾಪಟುಗಳು ಉದ್ದೀಪನ ದ್ರವ್ಯ ಸೇವಿಸಿದ್ದು ಪತ್ತೆಯಾಗಿತ್ತು. ಈ ಪೈಕಿ 9 ಮಾದರಿಗಳ ಹೆಚ್ಚುವರಿ ಪರೀಕ್ಷೆ ಅಗತ್ಯವಿದೆ ಎಂದೂ ಸೂಚಿಸಿದೆ. ಆದರೆ, 71ರಲ್ಲಿ 21 ಪ್ರಕರಣಗಳಲ್ಲಿ  ಉದ್ದೀಪನ ದ್ರವ್ಯ ಸೇವನೆ ದೃಢಪಟ್ಟಿದೆ ಎಂದು ವಾಡಾ ಘೋಷಿಸಿದೆ.

Advertisement

ಆದರೆ, 2015ಕ್ಕೆ ಹೋಲಿಸಿದರೆ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಎರಡು ವರ್ಷಗಳ ಹಿಂದೆ 110 ಮಾದರಿಗಳಲ್ಲಿ ಉದ್ದೀಪನ ದ್ರವ್ಯದ ಅಂಶ ಪತ್ತೆಯಾಗಿತ್ತು. ಆಗ 4,734 ಕ್ರೀಡಾಪಟುಗಳ ಪರೀಕ್ಷೆ ನಡೆದಿತ್ತೆಂಬುದೂ ಗಮನಾರ್ಹ.

815 ಆ್ಯತ್ಲೀಟ್‌ಗಳ ಮಾದರಿ
2017ರಲ್ಲಿ 815 ಆ್ಯತ್ಲೀಟ್‌ಗಳ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ 84 ರಕ್ತದ ಮಾದರಿಗಳೇ ಆಗಿದ್ದವು. 2ನೇ ಅತಿ ಹೆಚ್ಚು ಪರೀಕ್ಷೆಗಳು ಪವರ್‌ ಲಿಫ್ಟಿಂಗ್‌ ವಿಭಾಗದಲ್ಲಿ ನಡೆದಿವೆ. ಈ ಪೈಕಿ 14 ಮಾದರಿಗಳಲ್ಲಿ ನಿಷೇಧಿತ ದ್ರವ್ಯ ಪತ್ತೆಯಾಗಿತ್ತು. ವೇಟ್‌ ಲಿಫ್ಟಿಂಗ್‌ ವಿಭಾಗದಲ್ಲೂ 11 ಮಾದರಿಗಳಲ್ಲಿ ನಿಷೇಧಿತ ದ್ರವ್ಯ ಇರುವುದನ್ನು ಗುರುತಿಸಲಾಗಿತ್ತು. ದೇಹದಾಡ್ಯì ಕ್ರೀಡಾಪಟುಗಳಲ್ಲಿ 18 ಜನರ ಸ್ಯಾಂಪಲ್‌ಗ‌ಳು ಪಾಸಿಟಿವ್‌ ಆಗಿದ್ದವು. 

ಫ‌ುಟ್‌ಬಾಲ್‌, ಹಾಕಿಯಲ್ಲಿ ತಲಾ ಒಂದು ಮಾದರಿ ನಿಷೇಧಿತ ದ್ರವ್ಯ ಒಳಗೊಂಡಿತ್ತು. ಕುಸ್ತಿಯಲ್ಲಿ ನಾಲ್ವರು ಸಿಕ್ಕಿಬಿದ್ದಿದ್ದರು. ವಾಲಿಬಾಲ್‌, ಜೂಡೋ ಸ್ಪರ್ಧೆಗಳಲ್ಲಿ ಎರಡು, ಬಾಕ್ಸಿಂಗ್‌ನಲ್ಲಿ ನಾಲ್ವರು ದೋಷಿಗಳೆಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next