ಮಂಗಳೂರು: ಉಡುಪಿಯ ಶ್ರೀ ಸಂಸ್ಥಾನ ಪೇಜಾವರದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥರು ಶ್ರೀ ಕಾಶೀ ಮಠ ಸಂಸ್ಥಾನದ ಹರಿದ್ವಾರದ ಶ್ರೀ ವ್ಯಾಸ ಆಶ್ರಮದಲ್ಲಿರುವ ಶ್ರೀ ವ್ಯಾಸ ಮಂದಿರ, ಸದ್ಗುರು ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿಯವರ ವೃಂದಾವನ ಭೇಟಿ ಬಳಿಕ ವ್ಯಾಸ ಘಾಟ್ನಲ್ಲಿ ಗಂಗಾ ದರ್ಶನ ನಡೆಸಿದರು.
ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಪೇಜಾವರ ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿ ಸ್ವಾಗತಿಸಿದರು.
ಯತಿಗಳು ಪರಸ್ಪರ ಪುಷ್ಪ ಮಾಲಾರ್ಪಣೆ ಮೂಲಕ ಅಭಿನಂದಿಸಿದರು.ಕೊಚ್ಚಿ ತಿರುಮಲ ದೇವಸ್ಥಾನದ ಮೊಕ್ತೇಸರ ಜಗನ್ನಾಥ ಶೆಣೈ, ಜಿಎಸ್ಬಿ ಸೇವಾ ಮಂಡಳದ ಆರ್.ಜಿ. ಭಟ್, ಹೊಸದಿಲ್ಲಿ ಜಿಎಸ್ಬಿ ಸಮಾಜದ ಪ್ರಕಾಶ್ ಪೈ ಮೊದಲಾದವರು ಉಪಸ್ಥಿತರಿದ್ದರು.