ಆನೇಕಲ್: ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರವನ್ನು ರಾಜ್ಯದಲ್ಲೇ ಮೊದಲನೆಯದಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಸ್ಥಾಪಿಸಲು ಸದ್ದಿಲ್ಲದೆ ಸಿದ್ಧತೆಗಳು ನಡೆಯುತ್ತಿವೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಕಚೇರಿ ಹಿಂಭಾಗದಲ್ಲಿನ ಅರಣ್ಯ ಪ್ರದೇಶದಲ್ಲಿನ ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಅಳಿವಿನಂಚಿನ ರಣಹದ್ದು ಸಂತಾನೋತ್ಪತ್ತಿಕೇಂದ್ರ ಸ್ಥಾಪಿಸಲು ಸರ್ವೇ ಕಾರ್ಯ ಆರಂಭವಾಗಿದೆ.
ಬೆಂಗಳೂರು ಬನ್ನೇರು ಘಟ್ಟ ಜೈವಿಕ ಉದ್ಯಾನವನದ ವ್ಯಾಪ್ತಿಯಲ್ಲಿ ಮಾಡಲು ಚರ್ಚೆ ನಡೆದು ಉದ್ಯಾನವನ ವ್ಯಾಪ್ತಿಯಲ್ಲಿನ ಪ್ರಾಣಿ, ಪಕ್ಷಿಗಳಿಂದ ಸಂತಾನೋತ್ಪತ್ತಿಯಲ್ಲಿ ತೊಡಗಿರುವ ಪಕ್ಷಿಗಳಿಗೆ ಸೋಂಕು ತಗುಲಬಹುದು ಎಂಬ ಕಾರಣದಿಂದ ಉದ್ಯಾನವನದ ವ್ಯಾಪ್ತಿಯಿಂದ ದೂರ ಮಾಡಲು ನಿರ್ಧರಿಸಿ, ಅಂತಿಮವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಚೇರಿ ಸಮೀಪದಲ್ಲಿಮಾಡಲು ತೀರ್ಮಾನಿಸಲಾಗಿದೆಎಂದು ತಿಳಿದು ಬಂದಿದೆ.
ಅಳಿವಿನಂಚಿನ ದೊಡ್ಡ ಪಕ್ಷಿ: ರಣಹದ್ದುಗಳನ್ನು ಜಾಲಮಾಡಿಗಳು ಎಂದೂ ಕರೆಯುತ್ತಾರೆ. ಕಾರಣ ಮೃತಪಟ್ಟ ಪ್ರಾಣಿ, ಪಕ್ಷಿಗಳ ದೇಹವನ್ನು ತಿಂದು ನಮ್ಮ ಪರಿಸರವನ್ನು ಸ್ವತ್ಛವಾಗಿಸುವ ಪಕ್ಷಿಯೇ ರಣಹದ್ದು. ಅದೂ ಅಲ್ಲದೇ ಇದು ಅಳಿವಿನಂಚಿನ ದೊಡ್ಡ ಗಾತ್ರದ ಪಕ್ಷಿಯಾಗಿದ್ದು ಇಡೀ ದೇಶದಲ್ಲಿ 8 ಕಡೆ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರಗಳಿವೆ. ಇದರಲ್ಲಿ ಕೇವಲ 4 ಭಾಗಗಳಲ್ಲಿ ಮಾತ್ರ ಸಂತಾನೋತ್ಪತ್ತಿ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ರಾಜ್ಯ ರಣ ಹದ್ದುಗಳ ಸಂರಕ್ಷಣಾಟ್ರಸ್ಟ್‌ನ ಕಾರ್ಯದರ್ಶಿಶಶಿಕುಮಾರ್ ತಿಳಿಸಿದ್ದಾರೆ. ರಣಹದ್ದುಗಳು ಕೇವಲ ವರ್ಷಕ್ಕೆ ಒಂದು ಮೊಟ್ಟೆ ಇಡುತ್ತವೆ. ಮೊಟ್ಟೆ ಇಟ್ಟ 55 ರಿಂದ 60 ದಿನ ಕಾವು ಕೊಟ್ಟ ಬಳಿಕ ಮರಿಮಾಡುತ್ತವೆ. ನಂತರ ಮೂರು ತಿಂಗಳು ತಾಯಿಯೊಂದಿಗೆ ಇರುವ ಮರಿಗಳು,ನಂತರ ಸ್ವತಂತ್ರವಾಗಿ ಹಾರಾಟ ನಡೆಸತೊಡಗುತ್ತವೆ.
ಮತ್ತೆ ಹೆಣ್ಣು ಹದ್ದು ಮೊಟ್ಟೆ ಇಡಲು5 ರಿಂದ6 ವರ್ಷ ತೆಗೆದು ಕೊಳ್ಳುತ್ತವೆ. ಬನ್ನೇರುಘಟ್ಟದಲ್ಲಿ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ಅರಂಭವಾಗುವುದರ ಮೂಲಕ ಹಲವು ಹೆಗ್ಗಳಿಕೆ ಹೊಂದಿರುವ ಬನ್ನೇರು ಘಟ್ಟಕ್ಕೆ ಮತ್ತೂಂದು ಹಿರಿಮೆ ಸೇರಲಿದೆ. ಸಂತಾನೋತ್ಪತ್ತಿ ಕೇಂದ್ರದಲ್ಲಿ ಸಂತಾನೋತ್ಪತ್ತಿ ಯಶಸ್ವಿಯಾಗಲಿ ಎಂಬುದು ಪ್ರಾಣಿ ಪ್ರಿಯರ ಆಶಯವಾಗಿದೆ.
ರಾಮನಗರ ಆಸುಪಾಲಿನಲ್ಲಿ ಕೇಂದ್ರ ತೆರೆಯಲು ಚಿಂತನೆ ನಡೆದಿತ್ತು : ರಣಹದ್ದುಗಳ ಸಂತಾನೋತ್ಪತ್ತಿಕೇಂದ್ರ ರಾಜ್ಯದಲ್ಲಿ ಅದರಲ್ಲೂ ರಾಮನಗರದ ಶ್ರೀರಾಮದೇವರಬೆಟ್ಟದ ಅಸುಪಾಸಿನಲ್ಲಿ ತೆರೆಯ ಬೇಕೆಂಬ ಚಿಂತನೆ ಕಳೆದ 3 ವರ್ಷಗಳಿಂದ ಚಾಲ್ತಿಯಲ್ಲಿ ಇತ್ತು. ಇದರ ನಡುವೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ವಿಜ್ಞಾನಿ ಡಾ.ವಿಭೂ ಪ್ರಕಾಶ್ ರಾಮದೇವರ ಬೆಟ್ಟಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯೊಂದಿಗೆ ಮಾತನಾಡಿ ಚನ್ನಪಟ್ಟಣದ ಚಿಕ್ಕಮಣ್ಣುಗುಂಡ ಬಳಿ ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಿ, ಮೊಟ್ಟೆಗಳಿಂದ ಹೊರ ಬಂದ ರಣಹದ್ದು ಮರಿಗಳನ್ನು ಈಗಾಗಲೇ ರಣಹದ್ದುಗಳ ಆವಾಸ ಸ್ಥಾನವಾಗಿರುವ ರಾಮದೇವರ ಬೆಟ್ಟದಲ್ಲಿ ಬಿಡುಗಡೆ ಮಾಡ ಬೇಕೆಂಬ ನೀಲಿ ನಕ್ಷೆಯನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಅಲ್ಲಿನ ರಸ್ತೆ ಇನ್ನಿತರ ಅಭಿವೃದ್ಧಿ ದೃಷ್ಟಿಯಿಂದ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಅರಣ್ಯದಲ್ಲಿ ತೆರೆಯಲು ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.
–ಮಂಜುನಾಥ್ ಎನ್.ಬನ್ನೇರುಘಟ್ಟ