ನವ ದೆಹಲಿ : ವಿ.ಎಸ್. ಪಾರ್ಥಸಾರಥಿ ಅವರು ವೈಯಕ್ತಿಕ ಹಿತಾಸಕ್ತಿಗಳ ಕಾರಣದಿಂದ ಏಪ್ರಿಲ್ 1, 2021 ರಿಂದ ತಮ್ಮ ಮಹೀಂದ್ರಾ ಸಮೂಹದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ ಮಾಹಿತಿ ನೀಡಿದೆ.
ವಿ ಎಸ್ ಪಾರ್ಥಸಾರಥಿ ಅವರಿಂದ ತೆರವುಗೊಳ್ಳುವ ಸ್ಥಾನದ ಮೊಬಿಲಿಟಿ ಸರ್ವೀಸಸ್ ಸೆಕ್ಟರ್ ನ ಮೇಲ್ವಿಚಾರಣೆಯ ಹೆಚ್ಚುವರಿ ಜವಾಬ್ದಾರಿಯನ್ನು ಅನೀಶ್ ಶಾ ವಹಿಸಿಕೊಳ್ಳಲಿದ್ದಾರೆ ಎಂದು ಕೂಡ ಮಾಹಿತಿ ಲಭ್ಯವಾಗಿದೆ.
ಓದಿ : ರಾಜ್ಯ ಬಜೆಟ್: ಕೋವಿಡ್ ಕಾಲದ ಕೊರತೆ ನೀಗಿಸಲು ಆರೋಗ್ಯ ಕ್ಷೇತ್ರಕ್ಕೆ ಹಲವು ಯೋಜನೆಗಳು
ವೈಯಕ್ತಿಕ ಹಿತಾಸಕ್ತಿಗಾಗಿ ತನ್ನ ಮೊಬಿಲಿಟಿ ಸರ್ವೀಸಸ್ ಸೆಕ್ಟರ್ ನ ಅಧ್ಯಕ್ಷ ಮತ್ತು ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯ ವಿ.ಎಸ್. ಪಾರ್ಥಸಾರಥಿ ಅವರು 2021 ರ ಏಪ್ರಿಲ್ 1 ರಿಂದ ಈ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ ಪ್ರಕಟಿಸಿದ್ದು, ತನ್ನ ವೃತ್ತಿಜೀವನದ ಈ ಮುಂದಿನ ಹಂತದಲ್ಲಿ, ವ್ಯವಹಾರ, ಶಿಕ್ಷಣ ಮತ್ತು ಸಮಾಜದಾದ್ಯಂತದ ವ್ಯವಹಾರಗಳು ಬಗ್ಗೆ ಸಮಾಲೋಚಿಸಲು, ಮಾರ್ಗದರ್ಶನ ಮಾಡಲು, ತನ್ನ ಶ್ರೀಮಂತ ವೃತ್ತಿಪರ ಬದುಕಿನಿಂದ ಹೊರಗಿರಲು ಪಾರ್ಥಸಾರಥಿ ಬಯಸುತ್ತಾರೆ ಎಂದು ಕಂಪನಿ ತನ್ನ ರೆಗ್ಯೂಲೆಟರಿ ಫೈಲಿಂಗ್ ನಲ್ಲಿ ತಿಳಿಸಿದೆ.
ವಿ ಎಸ್ ಪಾರ್ಥಸಾರಥಿ ಮಹೀಂದ್ರಾ ಕಂಪೆನಿಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು 2013 – 2020 ರಿಂದ ಗ್ರೂಪ್ ಸಿಎಫ್‌ಒ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು, ಪಾರ್ಥಸಾರಥಿ, ತನ್ನ ಜೀವನದಲ್ಲಿ ಬಹು ದೊಡ್ಡ ತಿರುವನ್ನು ನೀಡಿದ ಮಹೀಂದ್ರಾ ಕಂಪೆನಿಗೆ ಧನ್ಯವಾದವನ್ನು ಸಮರ್ಪಿಸಿದ್ದಾರೆ.
ಓದಿ : ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಎರಡು ವಾಹನದಲ್ಲಿ ಭಾರಿ ಪ್ರಮಾಣದ ಸ್ಪೋಟಕ ಪತ್ತೆ!