Advertisement

ಪದ್ಮಭೂಷಣ ವಿ.ಪಿ. ಧನಂಜಯನ್‌ ಅವರಿಗೆ ಆಳ್ವಾಸ್‌ ವಿರಾಸತ್‌ ಪ್ರಶಸ್ತಿ

03:45 AM Jan 06, 2017 | Team Udayavani |

ಮೂಡಬಿದಿರೆ: ವಿಶ್ವವಿಖ್ಯಾತ ಕಥಕ್ಕಳಿ ಮತ್ತು ಭರತನಾಟ್ಯಪಟು ಪದ್ಮವಿಭೂಷಣ ವಿ.ಪಿ. ಧನಂಜಯನ್‌ ಅವರು “ಆಳ್ವಾಸ್‌ ವಿರಾಸತ್‌ ಪ್ರಶಸ್ತಿ-2017’ಗೆ ಆಯ್ಕೆಯಾಗಿದ್ದಾರೆ.

Advertisement

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಜ. 13ರಿಂದ 15ರ ವರೆಗೆ ನಡೆಯಲಿರುವ “ಆಳ್ವಾಸ್‌ ವಿರಾಸತ್‌-2017’ರ ಉದ್ಘಾಟನ ಸಮಾರಂಭಧಿದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ, ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಧನಂಜಯನ್‌ ಅವರನ್ನು 1 ಲಕ್ಷ ರೂ. ಗೌರವಧನ ಸಹಿತ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

1939ರಲ್ಲಿ ಜನಿಸಿದ ವನ್ನಾಡಿಲ್‌ ಪುದಿಯವೀಟಿಲ್‌ ಧನಂಜಯನ್‌ ಅವರು ವಿ.ಪಿ. ಧನಂಜಯನ್‌ ಎಂದೇ ಖ್ಯಾತರು. ತಂದೆಯವರ ನಾಟಕ ತಂಡದಲ್ಲಿ ಬಾಲಕ ಧನಂಜಯನ್‌ ಊರೂರು ಅಲೆದು ನಾಟಕದಲ್ಲಿ ಬಣ್ಣಹಚ್ಚುತ್ತಿದ್ದರು. ಮುಂದೆ, ಮದ್ರಾಸಿನ ಕಲಾಕ್ಷೇತ್ರದ ನಿರ್ಮಾಪಕಿ ರುಕ್ಮಿಣೀದೇವಿ ಅವರ ಕಣ್ಣಿಗೆ ಬಿದ್ದ ಧನಂಜಯನ್‌ ಅವರ ಬದುಕಿನ ಮಾರ್ಗವೇ ಬದಲಾಯಿತು. ರುಕ್ಮಿಣೀದೇವಿ ಅವರ ಮಾರ್ಗದರ್ಶನದಲ್ಲಿ ಕಥಕ್ಕಳಿ ಮತ್ತು ಭರತನಾಟ್ಯದಲ್ಲಿ ಪಳಗಿ ಖ್ಯಾತ ಪುರುಷ ನೃತ್ಯಪಟುವಾಗಿ ಪ್ರಸಿದ್ಧರಾದರು. 

ಖ್ಯಾತ ನೃತ್ಯಗಾತಿ ಶಾಂತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ವಿ.ಪಿ. ಧನಂಜಯನ್‌ ದಂಪತಿ ನೃತ್ಯಕ್ಷೇತ್ರದಲ್ಲಿ “ಧನಂಜಯನ್ಸ್‌’ ಎಂದೇ ಖ್ಯಾತರಾಗಿದ್ದಾರೆ. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಭೂಷಣವೂ ಸೇರಿದಂತೆ ಕೇರಳ, ತಮಿಳ್ನಾಡು ಸರಕಾರಗಳು ಹಾಗೂ ಅನೇಕ ಸಂಘ-ಸಂಸ್ಥೆಗಳ ಪ್ರಶಸ್ತಿ, ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next