Advertisement

ಮತದಾನ : ತವರೂರಿನತ್ತ  ಕರಾವಳಿ, ಉ.ಕರ್ನಾಟಕ ನಿವಾಸಿಗಳ ದೌಡು

06:00 AM May 12, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಸವಿರುವ ಕರಾವಳಿ ಭಾಗದ ಮೂರು ಜಿಲ್ಲೆಗಳ ನಿವಾಸಿಗಳು ಹಾಗೂ ಉತ್ತರ ಕರ್ನಾಟಕ ಭಾಗದವರು ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸ್ವಂತ ಊರುಗಳಿಗೆ  ತೆರಳಿದ್ದಾರೆ.

Advertisement

ಬಸ್‌, ರೈಲು ಸೀಟುಗಳು ವಾರದ ಹಿಂದೆಯೇ ಬಹುತೇಕ ಮುಂಗಡ ಕಾಯ್ದಿರಿಸಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದವರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಮೂರು ಪಕ್ಷಗಳಿಂದ ಮತದಾರರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆಯನ್ನು ಮಾಡಿದೆ. ಕರಾವಳಿ ಭಾಗದ ಮತದಾರರಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಡೆಯಿಂದ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಿದ್ದರೆ, ಉತ್ತರ ಕರ್ನಾಟಕ ಭಾಗದ ಮತದಾರರಿಗಾಗಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕವಾಗಿ 15, 20 ಹಾಗೂ 25 ಬಸ್‌ಗಳ ಸೌಲಭ್ಯ ಕಲ್ಪಿಸಿದ್ದಾರೆ.

ಬೆಂಗಳೂರಿನಲ್ಲಿರುವ ಮತದಾರರನ್ನು ಸೆಳೆಯಲು ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಹಾಗೂ ಮುಖಂಡರು ತಿಂಗಳಿಂದಲೇ ಬೇಕಾದ ತಯಾರಿ ಮಾಡಿಕೊಂಡಿದ್ದರು.ಇದಕ್ಕಾಗಿ ಪ್ರತ್ಯೇಕವಾಗಿ ಆಂತರಿಕ ಸಭೆ ಮಾಡಿದ್ದರು.

ಸ್ಥಳೀಯ ಮತದಾರರನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರಿಗೆ ವಹಿಸಿ, ಅವರಿಗಾಗಿ ವಾಟ್ಸಾಪ್‌ ಗ್ರೂಪ್‌ಗ್ಳನ್ನು  ಸೃಷ್ಟಿಸಿಕೊಂಡಿದ್ದರು. ಜಯನಗರ, ವಿಜಯನಗರ, ಬಸವನಗುಡಿ, ಚಾಮರಾಜನಗರ, ಮತ್ತಿಕೆರೆ, ಬಿಟಿಎಂ ಬಡಾವಣೆ, ಯಶವಂತಪುರ ಸಹಿತ ನಗರದ ಬಹುತೇಕ ಕಡೆಗಳಲ್ಲಿ  ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದವರು ಹೆಚ್ಚಿದ್ದಾರೆ. ನಾಲ್ಕೈದು ದಿನಗಳ ಹಿಂದೆಯೇ ಇಲ್ಲಿರುವ ಮತದಾರರನ್ನು ಅಲ್ಲಿನ ಕಾರ್ಯಕರ್ತರು ಸಂಪರ್ಕಿಸಿ, ಮತದಾನಕ್ಕೆ ಹೋಗಿ ಬರಲು ವ್ಯವಸ್ಥೆಯನ್ನು ಮಾಡಿದ್ದಾರೆ. ಬಹು ತೇಕರಿಗೆ ಬಸ್‌ ಹಾಗೂ ರೈಲು ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ

ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ನನ್ನ ಮತ ಊರಲ್ಲಿ ಇರುವುದರಿಂದ ಯಾವುದೇ ಚುನಾವಣೆ ಬಂದರೂ ಊರಿಗೆ ಹೋಗಿ ಮತ ಹಾಕಿ ಬರುತ್ತೇನೆ. ಏನೇ ಸಮಸ್ಯೆ ಇದ್ದರೂ ಮತ ಹಾಕುವುದು  ತಪ್ಪಿಸುವುದಿಲ್ಲ. ವಿಧಾನಸಭೆ ಚುನಾವಣೆಗಾಗಿ ಊರಿಗೆ ಹೋಗಲು ತಿಂಗಳ ಹಿಂದೆಯೇ ಬಸ್‌ ಟಿಕೆಟ್‌ ಮುಂಗಡ ಕಾಯ್ದಿರಿಸಿದ್ದೆ.
ರಾಜೇಶ್‌, ಮಂಗಳೂರಿನ ಮತದಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next