Advertisement

ಮತದಾನ ಪ್ರತಿಯೊಬ್ಬನ ಹಕ್ಕು : ಲಕ್ಷ್ಮೀಪ್ರಿಯಾ

12:30 AM Mar 16, 2019 | |

ಮಡಿಕೇರಿ: ಮತದಾನದ ಮಹತ್ವ ಕುರಿತ ಜಾಗೃತಿ ಜಾಥಗೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್‌) ಅಧ್ಯಕ್ಷೆ ಕೆ.ಲಕ್ಷ್ಮೀಪ್ರಿಯಾ ಅವರು ನಗರದ ಗದ್ದುಗೆ ಬಳಿ ಗುರುವಾರ ಚಾಲನೆ ನೀಡಿದರು.  
 
ಮತದಾನ ನಮ್ಮಿಂದ, ಮತದಾನ ಹೆಮ್ಮೆಯಿಂದ, ಮತ ಹಕ್ಕು ಚಲಾಯಿಸು ವುದು ಅರ್ಹರದ್ದಾಗಿದೆ, ತಪ್ಪದೇ ಮತ ಚಲಾಯಿಸಿ ಎಂದು ಸ್ವೀಪ್‌ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಕರೆ ನೀಡಿದರು. 
   
ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾರರ ಚುನಾವಣಾ ಗುರುತಿನ ಚೀಟಿ ಪಡೆದು ಕಡ್ಡಾಯವಾಗಿ ಮತ ಚಲಾಯಿಸಬೇಕು. ಜೊತೆಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಾತರಿಪಡಿಸಿ ಕೊಳ್ಳುವಂತಾಗಬೇಕು ಎಂದು ಜಿ.ಪಂ.ಸಿಇಒ ಅವರು ಸಲಹೆ ಮಾಡಿದರು.
   
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಮಾತನಾಡಿ ಪ್ರಜಾಪ್ರಭುತ್ವ ಬಲಪಡಿಸಲು ಅವಕಾಶ ಮತದಾನವಾಗಿದ್ದು, ಮತದಾನ ಎಂಬ ಅಸ್ತ್ರವನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದೆಂದು ಅವರು ಮನವಿ ಮಾಡಿದರು.  ಪೌರಾಯುಕ್ತರಾದ ಎಂ.ಎಲ್‌.ರಮೇಶ್‌ ಅವರು ಮಾತನಾಡಿ ಪ್ರಜಾಪ್ರಭುತ್ವದ ಜನತಂತ್ರದ ಹಬ್ಬದಲ್ಲಿ ಮತದಾರರು=ಮತ ಚಲಾಯಿಸಬೇಕು. ಇದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅರ್ಹರು ಮತದಾನ ಮಾಡಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಜಿ.ಪಂ.ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ನಗರ ಸಭೆಯ ಸುಜಾತಾ‌, ರಮೇಶ್‌, ಬಷೀರ್‌, ಶಿಶು ಅಭಿವೃಧಿ ಯೋಜನಾ ಇಲಾಖೆಯ ವ್ಯವಸ್ಥಾಪಕರಾದ ಸುನಿತಾ, ಮಮ್ತಾಜ್‌, ಮಂಜುನಾಥ್‌, ಯಶೋದಾಐ ಪ್ರಿಯಾ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಇತರರು ಉಪಸ್ಥಿತರಿದ್ದರು.ಜಾಥಾ ಮಹದೇವಪೇಟೆ ಮುಖ್ಯರಸ್ತೆ ಮೂಲಕ ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ವೃತ್ತ, ಜನರಲ್‌ ತಿಮ್ಮಯ್ಯ ವೃತ್ತ ಮೂಲಕ ಕಾವೇರಿ ಕಲಾ ಕ್ಷೇತ್ರದಲ್ಲಿ ಕೊನೆಗೊಂಡಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next