ಪಣಜಿ/ಡೆಹ್ರಾಡೂನ್/ಲಕ್ನೋ: ಪಂಚರಾಜ್ಯ ಚುನಾವಣೆಗಳ ಪೈಕಿ 2 ಸಣ್ಣ ರಾಜ್ಯಗಳಾಗಿರುವ ಗೋವಾ, ಉತ್ತರಾಖಂಡಗಳಿಗೆ ಸೋಮವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
40 ಕ್ಷೇತ್ರಗಳಿರುವ ಗೋವಾದಲ್ಲಿ 301 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 11 ಲಕ್ಷ ಮಂದಿ ಮತದಾರರಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಟಿಎಂಸಿ, ಆಮ್ ಆದ್ಮಿ ಪಕ್ಷ ಅದೃಷ್ಟ ಪರೀಕ್ಷೆಗೆ ಇಳಿದಿವೆ.
105 ಮಂದಿ ಮಹಿಳೆಯಿಂದಲೇ ನಿರ್ವಹಣೆಗೊಳ್ಳುವ ಬೂತ್‌ಗಳು ಕಾರ್ಯನಿರ್ವಹಿಸಲಿವೆ. ಸಿಎಂ ಪ್ರಮೋದ್ ಸಾವಂತ್, ಕಾಂಗ್ರೆಸ್‌ನ ದಿಗಂಬರ ಕಾಮತ್ ಪ್ರಮುಖರು.
ಉತ್ತರಾಖಂಡದ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ, ಕಾಂಗ್ರೆಸ್ ನಾಯಕ ಹರೀಶ್ ರಾವತ್ ಸೇರಿದಂತೆ 632 ಕಣದಲ್ಲಿದ್ದಾರೆ. 150 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಆಪ್ ಕೂಡ ಇಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ಉತ್ತರ ಪ್ರದೇಶದ 9 ಜಿಲ್ಲೆಗಳಾಗಿರುವ ಸಹರಾನ್ಪುರ, ಮೊರಾದಾಬಾದ್, ಸಂಭಾಲ್, ರಾಮ್‌ಪುರ್, ಅನ್ರೋಹಾ, ಬದೌನ್, ಬರೇಲಿ ಮತ್ತು ಶಹಜಹಾನ್ಪುರಗಳ 55 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ವಿತ್ತ ಸಚಿವ ಸುರೇಶ್ ಖನ್ನಾ, ಎಸ್‌ಪಿ ನಾಯಕ ಮೊಹಮ್ಮದ್ ಆಜಂ ಖಾನ್ ಸೇರಿದಂತೆ 586 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 2017ರಲ್ಲಿ ಈ ಜಿಲ್ಲೆಗಳಲ್ಲಿ ಬಿಜೆಪಿ 38 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.