Advertisement

ಮತದಾನ ಪ್ರಜಾಪ್ರಭುತ್ವದ ಜಾತ್ರೆ: ಹಿಪ್ಪರಗಿ

06:18 PM Nov 19, 2022 | Team Udayavani |

ರಬಕವಿ-ಬನಹಟ್ಟಿ: ಮತದಾನ ಪ್ರಜಾಪ್ರಭುತ್ವದ ಜಾತ್ರೆ. ಚುನಾವಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳಿಗೆ ಮತದಾನ ಮಾಡಲು ಹೇಳಬೇಕು. 18 ವರ್ಷ ಮೇಲ್ಪಟ್ಟವರು ಅಮೂಲ್ಯ ಮತವನ್ನು ಅರ್ಹ ಅಭ್ಯರ್ಥಿಗೆ ದಾನವಾಗಿ ನೀಡುವುದರ ಮೂಲಕ ಉತ್ತಮ ಸರ್ಕಾರವನ್ನು ಚುನಾಯಿಸುವ ಜವಾಬ್ದಾರಿ ಮತದಾರರ ಮೇಲಿರುತ್ತದೆ ಎಂದು ರಬಕವಿ ಬನಹಟ್ಟಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿ ಕಾರಿ ಸಂಜೀವ ಹಿಪ್ಪರಗಿ ತಿಳಿಸಿದರು.

Advertisement

ಸ್ಥಳೀಯ ಕೆಎಚ್‌ಡಿಸಿ ಮಾದರಿ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಎಚ್‌.ವೈ. ಆಲಮೇಲ ಮಾತನಾಡಿ, ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಮತದಾನದಲ್ಲಿ ಎಲ್ಲರೂ ಭಾಗವಹಿಸಬೇಕು. ಪಠ್ಯ ಮತ್ತು ಸಹಪಠ್ಯದ ಮೂಲಕ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾರರ ಯಾದಿಗೆ ತಮ್ಮ ಹೆಸರನ್ನು ನೊಂದಾಯಿಸಬೇಕು.

ಚುನಾವಾಣ ಆಯೋಗದವರು ವರ್ಷಕ್ಕೆ ನಾಲ್ಕು ಬಾರಿ ಮತದಾರರ ಯಾದಿಯಲ್ಲಿ ಹೆಸರು ನೊಂದಾಯಿಸಲು ಅವಕಾಶ ನೀಡಿದ್ದಾರೆ. 18 ವರ್ಷಕ್ಕಿಂತ ಆರು ತಿಂಗಳ ಮುಂಚಿತವಾಗಿಯೂ ಮತದಾರರ ಪಟ್ಟಿಗೆ ಹೆಸರನ್ನು ನೊಂದಾಯಿಸಬಹುದಾಗಿದೆ. ಆದರೆ 18 ವರ್ಷದ ನಂತರ ಮತದಾನಕ್ಕೆ ಅರ್ಹತೆ ಬರುತ್ತದೆ. ಮಕ್ಕಳಲ್ಲಿ ಚುನಾವಣೆ ಮತ್ತು ಮತದಾನದ ಮಹತ್ವವನ್ನು ತಿಳಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಯಾರೂ ಮತದಾನದಿಂದ ಹೊರಗುಳಿಯಬಾರದು
ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿ ವಿಜಯಕುಮಾರ ವಂದಾಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಮುಖ್ಯ ಶಿಕ್ಷಕ ಚಂದ್ರಕಾಂತ ಜೈನಾಪುರ, ಆಸಂಗಿ ಶಾಲೆಯ ಮುಖ್ಯಶಿಕ್ಷಕ ಎ.ಬಿ.ಡೆಂಗ್ರೆ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎಸ್‌.ಕಡಕೋಳ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ, ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ ಇದ್ದರು. ಶ್ರೀಶೈಲ ಬುರ್ಲಿ ಸ್ವಾಗತಿಸಿದರು. ಶೈಲಜಾ ಮಿರ್ಜಿ ನಿರೂಪಿಸಿ ವಂದಿಸಿದರು. ಪ್ರಕಾಶ ಅಥಣಿ, ಗೀತಾ ಕಟ್ಟಿಮನಿ, ವಿಜಯಲಕ್ಷ್ಮೀ ಲುಕ್‌, ವಿ.ಪಿ.ಮಾಳಿ, ಸುರೇಶ ನಾವಿ, ಲಕ್ಷ್ಮಣ ಬಡಿಗೇರ, ಚಂದ್ರಶೇಖರ ಬಶೆಟ್ಟಿ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next