Advertisement
ನಗರದ ಕೋಟೆ ವೃತ್ತದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿ ಸಿದ್ದ ಮತದಾನ ಅರಿವು ಕಾರ್ಯಕ್ರಮದಲ್ಲಿ ಮಾತ ನಾಡಿದರು. ಜಿಲ್ಲೆಯಲ್ಲಿ ದೌರ್ಜನ್ಯ ಮತ್ತು ದಬ್ಟಾಳಿಕೆ ನಡೆಸಿ ಮತದಾನ ಮಾಡಲು ಯಾವುದೇ ರೀತಿಯ ಅವಕಾಶಗಳು ನೀಡುವುದಿಲ್ಲ ಮತದಾರರಿಗೆ ಮುಕ್ತ ವಾತಾವರಣದಲ್ಲಿ ಮತದಾನ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತದಾರರಿಗೆ ಯಾರಾದರೂ ಬೆದರಿಸಿದರೆ ಅಥವಾ ಆಮಿಷಗಳನ್ನು ಒಡ್ಡಿದರೆ ಕಾನೂನು ರೀತಿಯ ಕ್ರಮ ಜರುಗಿಸ ಲಾಗುವುದು ಎಂದು ಹೇಳಿದರು.
Related Articles
Advertisement
ಈ ವೇಳೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಿ.ಎಲ್. ನಾಗೇಶ್, ಚುನಾವಣಾಧಿಕಾರಿ ಜಾವೀದಾ ನಸೀಮಾ ಖಾನಂ, ನಗರಸಭೆ ಪೌರಾಯುಕ್ತ ಆರ್. ಶ್ರೀಕಾಂತ್, ಸಿಪಿಐ ನಂದಕುಮಾರ್, ಪಿಎಸ್‌ಐ ಸುನೀಲ್‌ಕುಮಾರ್, ವೇಣುಗೋಪಾಲ್, ಎಎಸ್‌ಐ ನವಾಜ್ ಇತರರು ಹಾಜರಿದ್ದರು.
ಏ.11ರವರೆಗೂ ನೋಂದಣಿಗೆ ಅವಕಾಶ : ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ದೂರು ಸಾಮಾನ್ಯವಾಗಿ ಕೇಳಿ ಬರುತ್ತಿದೆ ಅದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದಿಯೋ ಅಥವಾ ಇಲ್ಲವೋ ಎಂಬುದರ ವಿಚಾರವನ್ನು ತಿಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಜತೆಗೆ 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ತಮ್ಮ ಹೆಸರುಗಳನ್ನು ಮತದಾನ ಪಟ್ಟಿಯಲ್ಲಿ ನೋಂದಣಿಗೆ ಏ. 11 ವರೆಗೆ ಅವಕಾಶ ಕಲ್ಪಿಸಲಾಗಿದೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಾಗರಾಜ್ ಮನವಿ ಮಾಡಿದರು.