ಚಿಕ್ಕಬಳ್ಳಾಪುರ: ಭಾರತ ಚುನಾವಣಾ ಆಯೋಗವು ವಿಧಾನ ಸಭೆ/ಲೋಕಸಭೆ ಮತಕ್ಷೇತ್ರದ ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಭೆ ಉದ್ದೇಶಿಸಿ ಮಾತನಾಡಿದರು.
ಯುವ ಸಮುದಾ ಯಕ್ಕೆ ನೋಂದಣಿಗೆ 4 ಅವಕಾಶಗಳಿವೆ. ಮೊದಲಿದ್ದಂತೆ ಅರ್ಹತಾ ದಿನಾಂಕವಾದ ಜನವರಿ 1ರ ವರೆಗೂ ಕಾಯಬೇಕಾಗಿಲ್ಲ. 17 ವರ್ಷಕ್ಕಿಂದ ಮೇಲ್ಪಟ್ಟ ಯುವಕರು ಮುಂಗಡ ಅರ್ಜಿ ಸಲ್ಲಿಸಬಹುದು. ಆ. 1ರಿಂದ ನೋಂದಣಿಗೆ ಹೊಸ ಸರಳೀಕರಿಸಿದ ನಮೂನೆಗಳನ್ನು ನೀಡಲಾಗುತ್ತದೆ ಎಂದರು.
ಹೆಸರು ಇನ್ನಿತರ ತಿದ್ದುಪಡಿಗೆ ಹೊಸ ನಮೂನೆ 8 ಲಭ್ಯವಾಗಲಿದೆ. ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತವಾಗಿ ಆಧಾರ್ ಜೋಡಣೆ ಆಗಲಿದೆ. ಒಂದೇ ರೀತಿಯ ಹೆಸರು/ ಫೋಟೊ ಹೊಂದಿ ರುವ ಮತದಾರರ ಪರಿಶೀಲನೆಗೆ ಆದ್ಯತೆ ಕೊಡ ಲಾಗುತ್ತದೆ. ಪೂರ್ವ ಪರಿಷ್ಕರಣೆ ಆಗಸ್ಟ್‌ನಿಂದ ಪ್ರಾರಂಭವಾಗಲಿದೆ. ಎಲ್ಲ ತಿದ್ದುಪಡಿಗಳೂ ಆಗಸ್ಟ್ 1 ರಿಂದ ಜಾರಿಗೆ ಬರಲಿವೆ’. ಪ್ರತಿ ವರ್ಷದ ಏ. 1, ಜು. 1 ಮತ್ತು ಅ. 1 ರಂದು ಹೆಸರುಗಳ ಸೇರ್ಪ ಡೆಗೆ ಅವಕಾಶವಿದೆ. ಮುಂದಿನ ಪಟ್ಟಿಯನ್ನು ಪ್ರತಿ ತ್ರೈಮಾಸಿಕದಲ್ಲಿ ಪ್ರಕಟಿಸಲಾಗುವುದು ಎಂದರು.
ಈ ಮೊದಲು, ಹೆಸರು ಸೇರ್ಪಡೆ ಮತ್ತು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೂಂದು ಕ್ಷೇತ್ರಕ್ಕೆ ವರ್ಗಾವಣೆಗೆ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಇದನ್ನು ಪರಿಷ್ಕರಿಸಿ ನಮೂನೆ- 6ನ್ನು ಹೆಸರು ಸೇರ್ಪಡೆಗೆ ಮಾತ್ರ ಸೀಮಿತ ಗೊಳಿಸಲಾಗಿದೆ. ಹೆಸರು ಸೇರ್ಪಡೆ ಆಕ್ಷೇಪಣೆ ಮತ್ತು ಹೆಸರು ತೆಗೆದು ಹಾಕಲು ಚಾಲ್ತಿಯಲ್ಲಿರುವ ನಮೂನೆ-7ನ್ನು ಪರಿಷ್ಕರಿಸಲಾಗಿದೆ. ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೆ ತೆಗೆಯಲು ನಮೂನೆ-7 ರಲ್ಲಿ ಅವಕಾಶ ಕಲ್ಪಿಸಿ ಪರಿಷ್ಕರಿಸಲಾಗಿದೆ. ಎಂದರು.
ಪ್ರಸ್ತುತ ಪರಿಷ್ಕೃತ ನಮೂನೆ-8ರ ಅನ್ವಯ ಮತದಾರರ ಹೆಸರು, ವಿಳಾಸ ಮತ್ತು ಭಾವ ಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಜೊತೆಗೆ ಒಂದು ವಿಧಾನಸಭಾ ಕ್ಷೇತ್ರದಿಂದ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ವರ್ಗಾವಣೆ, ಬದಲಿ ಎಪಿಕ್ ಗಾಗಿ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರ ತಮ್ಮ ಅಂಗವೈಕಲ್ಯ ದಾಖಲಿಸಲು ಅವಕಾಶವಿದೆ. ಈ ಹಿಂದೆ ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಸ್ಥಳಾಂತರಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8ಎ ರದ್ದುಪಡಿಸಲಾಗಿದೆ. ಪಟ್ಟಿಯಲ್ಲಿನ ಮತದಾರರ ದೃಢೀಕರಣಕ್ಕೆ ಹೊಸದಾಗಿ ನಮೂನೆ 6ಬಿ ಜಾರಿಗೆ ತರಲಾಗಿದೆ. ನಮೂನೆ 6ಬಿ ಯಲ್ಲಿ ಮಾಹಿತಿ ದೃಢೀಕರಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅವಕಾಶವಿದೆ.
ಚುನಾವಣಾ ತಹಶೀಲ್ದಾರ್ ಮೈಕಲ್ ಬೆಂಜ ಮಿನ್, ಜನತಾದಳ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್. ಮುನೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಮಧುಸೂದನ್, ಬಿ.ಎಸ್.ಪಿ ಪಕ್ಷದ ಮುನಿಕೃಷ್ಣಪ್ಪ ಸೇರಿದಂತೆ ಸಿಬ್ಬಂದಿ ಇದ್ದರು.