Advertisement

3 ಕ್ಷೇತ್ರಗಳಲ್ಲಿ 9.80 ಲಕ್ಷ ಮತದಾರರು

10:07 AM Jan 16, 2023 | Team Udayavani |

ಬೆಂಗಳೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಡೆಸಲಾಗಿರುವ ಮತದಾರರ ಪಟ್ಟಿ ವಿಶೇಷ ಸಂಸ್ಕರಣೆ ಅಂತಿಮಗೊಂಡಿದ್ದು, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬಾಕಿ ಇದ್ದ 3 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗಿದೆ.

Advertisement

ಅದರಂತೆ ಚಿಕ್ಕಪೇಟೆ, ಶಿವಾಜಿನಗರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತಿಮವಾಗಿ 9,80,542 ಮತದಾರರಿದ್ದಾರೆ. 2020ರ ಡಿಸೆಂಬರ್‌ ತಿಂಗಳಲ್ಲೇ ಪ್ರಕಟವಾಗ ಬೇಕಿದ್ದ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿ ಒಂದು ತಿಂಗಳ ನಂತರ ಪ್ರಕಟಗೊಂಡಿದೆ.

ಮತದಾರರ ಮಾಹಿತಿ ಸೋರಿಕೆ ಸೇರಿ ಇನ್ನಿತರ ಕಾರಣಗಳಿಂದಾಗಿ ಮತದಾರರ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲನೆಗೆ ಚುನಾವಣಾ ಆಯೋಗ ಕ್ರಮ ಕೈಗೊಂಡಿತ್ತು. ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಕಳೆದ ಜ. 5ರಂದೇ ಪ್ರಕಟಿಸಲಾಗಿತ್ತು. ಇದೀಗ ಭಾನುವಾರ ಉಳಿದ ಮೂರು ಕ್ಷೇತ್ರಗಳಾದ ಚಿಕ್ಕಪೇಟೆ, ಶಿವಾಜಿನಗರ ಮತ್ತು ಮಹದೇವಪುರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.

ನೂತನ ಪಟ್ಟಿಯಂತೆ ಕರಡು ಪಟ್ಟಿಗಿಂತ 13,726 ಮತದಾರರು ಹೆಚ್ಚಾಗುವಂತಾಗಿದೆ. ಅಲ್ಲದೆ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟಾರೆ ಮತದಾರರ ಸಂಖ್ಯೆ 92,09,917ಕ್ಕೇರಿದೆ.

ಕಳೆದ ನವೆಂಬರ್‌ನಲ್ಲಿ ಪ್ರಕಟಿಸಲಾಗಿದ್ದ ಚಿಕ್ಕ ಪೇಟೆ, ಶಿವಾಜಿನಗರ ಮತ್ತು ಮಹದೇವಪುರ ವಿಧಾ ನಸಭಾ ಕ್ಷೇತ್ರಗಳ ಕರಡು ಪಟ್ಟಿಯಲ್ಲಿ 9,66,816 ಮತದಾರರಿದ್ದರು. ಇದೀಗ ಆ ಸಂಖ್ಯೆ 9,80,542ಕ್ಕೆ ಹೆಚ್ಚಳವಾಗಿದೆ. ಅದರಲ್ಲಿ 5,15,983 ಪುರುಷ, 4,64,415 ಮಹಿಳಾ ಮತದಾರರಿದ್ದಾತೆ. ಉಳಿದಂತೆ 144 ಇತರೆ ಮತದಾರರಿದ್ದಾರೆ. 2022ರ ಜ. 13ರ ವೇಳೆಗೆ ಈ ಮೂರು ಕ್ಷೇತ್ರಗಳಲ್ಲಿ 9,98,078 ಮತದಾರರಿದ್ದರು. ಅದನ್ನು ಗಮನಿಸಿದರೆ ಒಂದೇ ವರ್ಷದಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ 17,536 ಕಡಿಮೆಯಾಗುವಂತಾಗಿದೆ.

Advertisement

94 ಸಾವಿರ ಮತದಾರರ ಹೆಚ್ಚಳ: ಮೂರು ಕ್ಷೇತ್ರಗಳ ಅಂತಿಮ ಪಟ್ಟಿ ಪ್ರಕಟದ ನಂತರ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕರಡು ಮತದಾರರ ಪಟ್ಟಿಗಿಂತ 94,112 ಮತದಾರರು ಹೆಚ್ಚಾಗುವಂತಾಗಿದೆ.

ಕರಡು ಪಟ್ಟಿಯಲ್ಲಿ 91,15,805 ಮತ ದಾರರಿದ್ದರು. ಅದೇ ಅಂತಿಮ ಪಟ್ಟಿಯಲ್ಲಿ ಒಟ್ಟಾರೆ 92,09,917 ಮತದಾರರಿದ್ದಾರೆ. ಅದನ್ನು ಗಮನಿಸಿ ದರೆ ಮತದಾರರ ಸಂಖ್ಯೆ ಎರಡು ತಿಂಗಳಲ್ಲಿ ಗಣ ನೀಯ ಪ್ರಮಾಣದಲ್ಲಿ ಹೆಚ್ಚಳವಾಗುವಂತಾಗಿದೆ.

ತಪ್ಪುಗಳು ಇದ್ದರೆ ಸರಿಪಡಿಸಿಕೊಳ್ಳಿ : ಅಂತಿಮ ಪಟ್ಟಿಯನ್ನು ವಿಎಚ್‌ಎ ಮೊಬೈಲ್‌ ಆ್ಯಪ್‌ ಮತ್ತು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ (ಎನ್‌ವಿಎಸ್‌ಪಿ)ನಲ್ಲಿ ಮತದಾರರು ಮಾಹಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ಅದರಲ್ಲಿ ತಪ್ಪುಗಳಿದ್ದರೆ ಚುನಾವಣಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ನೋಂದಣಾಧಿಕಾರಿಗಳ ಕಚೇರಿ, ವಾರ್ಡ್‌ ಕಚೇರಿ ಹಾಗೂ ಬೂತ್‌ ಮಟ್ಟದ ಅಧಿಕಾರಿಗಳ ಬಳಿ ನಮೂನೆ 6, 7 ಮತ್ತು 8ರಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ.

2.82 ಲಕ್ಷ ಇಳಿಕೆ : ಕಳೆದ 2022ರ ಜನವರಿಯಲ್ಲಿ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಅಂತಿಮ ಮತ ದಾರ ಪಟ್ಟಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 94,92,539 ಮತದಾರರಿದ್ದರು. ಈ ಬಾರಿಯ ಅಂತಿಮ ಮತದಾರ ಪಟ್ಟಿಯಲ್ಲಿ 92,09,917 ಮತದಾರರಿ ದ್ದಾರೆ. ಇದನ್ನು ಗಮನಿಸಿದರೆ ಕಳೆದ ಒಂದು ವರ್ಷದಲ್ಲಿ ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,82,622 ಮತದಾರರು ಕಡಿಮೆ ಆಗಿದ್ದಾರೆ. ಈ ಪೈಕಿ 1,53,646 ಪುರುಷರು, 1,30,643 ಮಹಿಳಾ ಮತದಾರರ ಸಂಖ್ಯೆ ಕಡಿಮೆಯಾದರೆ, ಲೈಂಗಿಕ ಅಲ್ಪಸಂಖ್ಯಾತ ಮತದಾರರ ಸಂಖ್ಯೆಯಲ್ಲಿ 743 ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next