Advertisement

ಅರ್ಹರನ್ನು ಹುಡುಕಿ ಮತದಾರರ ಪಟ್ಟಿಗೆ ಸೇರಿಸಿ: ಡಾ|ಕುಮಾರ್‌

11:32 PM Dec 03, 2022 | Team Udayavani |

ಮಂಗಳೂರು: ಅರ್ಹರಿದ್ದು, ಇನ್ನೂ ಸೇರ್ಪಡೆಯಾಗದ ಮತದಾರರನ್ನು ಕೂಡಲೇ ಮತದಾರರ ಪಟ್ಟಿಗೆ ಸೇರಿಸುವಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್‌ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ನಗರದ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023 ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೃತೀಯ ಲಿಂಗಿಗಳು, ಬುಡಕಟ್ಟು ಜನಾಂಗದ ನಾಗರಿಕರು, ಯುವ ಮತದಾರರು ಸೇರಿದಂತೆ ಇನ್ನೂ ಹಲವು ವರ್ಗದ ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಅಂತಹವರನ್ನು ಹುಡುಕಿ ಆದಷ್ಟು ಬೇಗ ಅವರ ಹೆಸರು ಸೇರ್ಪಡೆಗೊಳಿಸುವುದು ಮತದಾರರ ಸಾಕ್ಷರತಾ ಸಂಘದ ಕರ್ತವ್ಯ ಎಂದರು.

ಜಿಲ್ಲೆಯಲ್ಲಿ ಯುವ ಮತದಾರರ ಅನುಪಾತ ಕಡಿಮೆ ಇದೆ. ಅರ್ಹ ಯುವಕರಿಗೆ ಮತದಾನದ ಮಹತ್ವದ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅಲೆದಾಡುವ ಅಗತ್ಯವಿಲ್ಲ. ವೋಟರ್‌ ಹೆಲ್ಪ್ ಲೈನ್ ಆ್ಯಪ್‌ ಅಥವಾ ನ್ಯಾಶನಲ್‌ ವೋಟರ್‌ ಸರ್ವಿಸ್‌ ಪೋರ್ಟಲ್‌ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಇವುಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ, ಕಾಲೇಜು ಶಿಕ್ಷಣದ ವಿಶೇಷಾಧಿಕಾರಿ ದೇವಿಪ್ರಸಾದ್‌, ಸಂಪನ್ಮೂಲ ವ್ಯಕ್ತಿ ಪ್ರಮಿಳಾ ರಾವ್‌, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪ್ರಾಧ್ಯಾಪಕಿ ಭಾರತಿ ಪಿಲಾರ್‌ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next