Advertisement

ಮತದಾರರ ಪಟ್ಟಿ ಪರಿಶೀಲನೆ ಆರಂಭ: ದ.ಕ. ಡಿಸಿ

12:59 AM Sep 18, 2019 | mahesh |

ಮಂಗಳೂರು: ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಲು ಮತದಾರರ ಪಟ್ಟಿ ಪರಿಶೀಲನೆಯನ್ನು ಸೆ.1ರಿಂದ ಅ.15ರ ವರೆಗೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾವಣ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಶೀಲನೆ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮನೆಗಳಿಗೆ ಬಿಎಲ್‌ಒಗಳು ಸೆ.1ರಿಂದ 30ರ ವರೆಗೆ ಭೇಟಿ ನೀಡಲಿದ್ದಾರೆ. ನಾಗರಿಕರು ಅಗತ್ಯ ಯಾವುದಾದರೂ ಒಂದು ದಾಖಲೆ ನೀಡಿ ತಿದ್ದುಪಡಿ ಇದ್ದಲ್ಲಿ ಪರಿಶೀಲಿಸಬಹುದು. ಬಿಎಲ್‌ಒಗಳು ಆ್ಯಪ್‌ ಮೂಲಕ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಸೇವಾಸಿಂಧು ಕೇಂದ್ರ, ಮತದಾರರ ನೋಂದಣಾಧಿಕಾರಿ/ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ತೆರಳಿ ಪರಿಶೀಲಿಸಲು ಅವಕಾಶವಿದೆ ಎಂದರು.

ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ. ಉಪಸ್ಥಿತರಿದ್ದರು. ಉಡುಪಿಯಲ್ಲೂ ಪರಿಷ್ಕರಣೆ ಉಡುಪಿ ಜಿಲ್ಲೆಯಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಅ.15ರ ವರೆಗೆ ನಡೆಯುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

ಮೊಬೈಲ್‌ ಆ್ಯಪ್‌ Voter
Helpline App, ವೆಬ್‌ಪೋರ್ಟಲ್‌ www.nvsp.in ಅಥವಾ ಮತದಾರರ ಸಹಾಯ ವಾಣಿ 1950 ಸಂಖ್ಯೆಗೆ ಕರೆ ಮಾಡಿ ಪರಿಶೀಲಿಸಲು ಕೂಡ ಅವಕಾಶವಿದೆ. ವೋಟರ್‌ ಐಡಿಯ ಭಾವಚಿತ್ರ ಬದಲಾವಣೆಗೂ ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next