Advertisement
ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯ ಎಲ್ಲಾ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಜಿಲ್ಲಾಡಳಿತದ ವತಿಯಿಂದ ಪ್ರಾರಂಭಿಸಲಾಗಿರುವ ಮತದಾರರ ಸಹಾಯವಾಣಿ ಕೇಂದ್ರದ ಮೂಲಕ ಸುಗಮ ಚುನಾವಣೆ ಮತ್ತು ಎಲ್ಲರೂ ಮತದಾನದಲ್ಲಿ ಭಾಗವಹಿಸಲು ಅಗತ್ಯವಿರುವ ನೆರವು ನೀಡಲಾಗುತ್ತಿದೆ.
ಮನೆಯಲ್ಲಿರುವ ಅಶಕ್ತರಿಗೆ ಮತಗಟ್ಟೆಗೆ ತೆರಳಲು ವಾಹನ ಸೌಲಭ್ಯ, ವೀಲ್ ಚೇರ್ ವ್ಯವಸ್ಥೆ, ಅಂಧ ಮತದಾರರಿಗೆ ಬೇಕಾದ ಸೌಲಭ್ಯಗಳು, ಮತದಾರರ ಪಟ್ಟಿಯಲ್ಲಿ ಹೆಸರು ಎಲ್ಲಿದೆ, ಯಾವ ಕ್ಷೇತ್ರ , ಯಾವ ಮತಗಟ್ಟೆ ಎಂಬ ಮಾಹಿತಿ ಸಹ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಈ ತನಕ ಸಹಾಯವಾಣಿಯ ಮೂಲಕ 1,327 ಕರೆ ಸ್ವೀಕರಿಸಲಾಗಿದೆ. ತಮ್ಮ ಮತಕೇಂದ್ರದ ಬಗ್ಗೆ ಮಾಹಿತಿ ಕೇಳಿ 317 ಮಂದಿ, ಹೊಸದಾಗಿ ಮತಪಟ್ಟಿಗೆ ಹೆಸರು ಸೇರಿಸಲು 433 ಮಂದಿ, ಮತಪಟ್ಟಿrಯಲ್ಲಿ ಹೆಸರು ತೆಗೆಯುವ ಬಗ್ಗೆ 144 ಮಂದಿ , ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೂಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುವ ಬಗ್ಗೆ 229 ಮಂದಿ, ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು 140 ಮಂದಿ, 22 ದೂರುಗಳು, ನೇರವಾಗಿ ನೀಡಲಾಗಿರುವ 42 ದೂರುಗಳನ್ನು ಸ್ವೀಕರಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
Related Articles
ಸಹಾಯವಾಣಿ ಮೂಲಕ 247 ದೂರು ಸ್ವೀಕರಿಸಲಾಗುತ್ತಿದ್ದು, ಇದಕ್ಕಾಗಿ 3 ಪಾಳಿಯಲ್ಲಿ 6 ಜನ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Advertisement