Advertisement

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್‌ ಚಿತ್ತ!

03:51 PM Mar 21, 2023 | Team Udayavani |

ಮಹಾನಗರ: ವಿಧಾನಸಭೆ ಚುನಾವಣೆಗೆ ದಿನ ಘೋಷಣೆಯಾಗುವ ಮುಂಚಿತವಾಗಿ ಈ ಬಾರಿ ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ ಮತದಾನಕ್ಕೆ ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಬಹು ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮತದಾನದಿಂದ ದೂರ ಉಳಿಯುವ ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯುವಲ್ಲಿ ಆಕರ್ಷಿಸಲು ಸ್ವೀಪ್‌ ಮೂಲಕ ವಿಭಿನ್ನ ಕಾರ್ಯಕ್ರಮಗಳಿಗೆ ರೂಪರೇಖೆ ಹಾಕಲಾಗಿದೆ.

Advertisement

ಸರ್ವೇ ಪ್ರಕಾರ ಕಳೆದ ಚುನಾವ ಣೆಯ ಮತದಾನವನ್ನು ಗಮನಿಸಿದರೆ, ದ.ಕ. ಜಿಲ್ಲೆಯ ನಗರ ಭಾಗದಲ್ಲಿ ಮತದಾನ ಕಡಿಮೆ. ಜಿಲ್ಲೆಯಲ್ಲಿ ಶೇ. 83ರಷ್ಟು ಮತದಾನವಾಗಿದೆ. ಇದರಲ್ಲಿ ಮಂಗ ಳೂರು ದಕ್ಷಿಣ ಕ್ಷೇತ್ರದಲ್ಲಿ ಮತ ದಾನ ಕೇವಲ ಶೇ. 67. ರಾಜ್ಯದ ಎರಡನೇ ಪ್ರಮುಖ ನಗರವಾಗಿರುವ “ಮಂಗಳೂರು ದಕ್ಷಿಣ’ದಲ್ಲಿ ಮತದಾನದ ಬಗ್ಗೆ ಯು ಕರಲ್ಲಿ ನಿರಾಸಕ್ತಿಯನ್ನು ಗಮನಿಸಿರುವ ಜಿಲ್ಲಾಡಳಿತ ಈ ಬಾರಿ ಇಂತಹ ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು ಮುಂದಾಗಿದೆ. ದ.ಕ. ಜಿಲ್ಲೆಯಲ್ಲಿ ಸ್ವೀಪ್‌ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ) ಕಾರ್ಯಕ್ರಮ ಅನುಷ್ಠಾನಕ್ಕಾಗಿ “ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಅಧಿಕಾರಿ’ ಪ್ರಶಸ್ತಿ ಪಡೆದಿರುವ ದ.ಕ. ಜಿ.ಪಂ. ಸಿಇಒ ಡಾ| ಕುಮಾರ್‌ ಅವರು ಈ ಬಾರಿ ಮತ್ತೆ ವಿನೂತನವಾಗಿ ಸ್ವೀಪ್‌ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ಗಳ ಗುರಿ ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ಗಳನ್ನು ಪ್ರಮುಖ ಗುರಿಯಾಗಿಸಿ ಅಲ್ಲಿನ ಅಧ್ಯ ಕ್ಷರನ್ನೇ ಅಂಬಾಸಿಡರ್‌ ಮಾಡಿ ಕೊಂಡು ಅಲ್ಲಿನ ಸರಕಾರಿ ಅಧಿಕಾರಿಗಳನ್ನು ಒಳಗೊಂಡು ಸಮಿತಿ ರಚಿಸಿ, ಯುವಕ ರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್‌ ಮೂಲಕ ಕ್ರಮ ವಹಿಸುವುದಾಗಿ ಡಾ| ಕುಮಾರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಮಾಲ್‌ಗ‌ಳು, ರೈಲು ನಿಲ್ದಾಣ, ಏರ್‌ ಪೋರ್ಟ್‌, ಬಸ್‌ ನಿಲ್ದಾಣ, ಮಾರು ಕಟ್ಟೆ, ಬಂದರು ಪ್ರದೇಶ ಸಹಿತ ಜನದಟ್ಟಣೆಯ ಪ್ರದೇಶಗಳಲ್ಲಿ ಯಕ್ಷ ಗಾನ ಕಲೆಯ ಮೂಲಕ ಮತದಾನದ ಜಾಗೃತಿ ಮೂಡಿಸುವ ಬಗ್ಗೆಯೂ ಸಿದ್ಧತೆ ನಡೆಸಲಾಗುತ್ತಿದೆ.

ಜಾಲತಾಣಗಳ ಮೂಲಕ ಜಾಗೃತಿ
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳ ಮೂಲಕ ಮತದಾನದ ಬಗ್ಗೆ ಆಡಿಯೋ, ವಿಶುವಲ್‌ ಜಾಹೀರಾತುಗಳ ಪ್ರಕಟ, ಸ್ವತ್ಛ ವಾಹಿನಿ ವಾಹನಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಆಡಿಯೋ ಮೊದಲಾದ ವಿಭಿನ್ನ ಹಾಗೂ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ಮಾದರಿ ಮತಗಟ್ಟೆಗಳು- ಸ್ಟಾರ್‌ ಪ್ರಚಾರ ಕರು!
ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಪ್ರಯತ್ನವಾಗಿ ಈಗಾಗಲೇ ಜಿಲ್ಲೆಯ 100 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಗುರುತಿಸಿ ಅಲ್ಲಿ ಜಿಲ್ಲೆಯ ವಿಶೇಷ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕಂಬಳ, ಯಕ್ಷಗಾನದ ಜತೆಗೆ ಪಶ್ಚಿಮ ಘಟ್ಟಗಳ ಹಸುರನ್ನು ತೆರೆದಿಡುವ “ಗೋ ಗ್ರೀನ್‌’, ಸಮುದ್ರ ನಗರಿಯ ಸೌಂದರ್ಯವನ್ನು ತೆರೆದಿಡುವ “ಬ್ಲೂವೇವ್‌’, ಇಲ್ಲಿನ ಪರಂಪರೆಯನ್ನುತೋರ್ಪಡಿಸುವ “ಹೆರಿಟೇಜ್‌’ ಮತಗಟ್ಟೆ  ಗಳನ್ನಾಗಿ ಚಿತ್ರೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೇ ವೇಳೆ ಹರೇಕಳ ಹಾಜಬ್ಬರಂತಹ ಮಾದರಿ ವ್ಯಕ್ತಿತ್ವ ಹಾಗೂ ಸ್ಟಾರ್‌ ಪ್ರಚಾರಕರಿಂದ ಮತದಾನ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ ಎಂದು ಡಾ| ಕುಮಾರ್‌ ಮಾಹಿತಿ ನೀಡಿದ್ದಾರೆ.

ದ.ಕ.: ಮನೆಯಿಂದಲೇ ಮತದಾನಕ್ಕೆ 60,862 ಮಂದಿ ಅರ್ಹರು ದೇಶದಲ್ಲೇ ಮೊದಲ ಪ್ರಯೋಗವಾಗಿ ರಾಜ್ಯದಲ್ಲಿ 2023ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣೆ ಆಯೋಗ ಘೋಷಿಸಿದೆ.

ಇದರಂತೆ ದ.ಕ. ಜಿಲ್ಲೆಯಲ್ಲಿ 60,862 ಮಂದಿ ಮತದಾರರು ಅರ್ಹತೆಯನ್ನು ಪಡೆಯಲಿದ್ದಾರೆ. ದ.ಕ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು 38,287, 90 ವರ್ಷ ಮೇಲ್ಪಟ್ಟವರು 8,100 ಹಾಗೂ 100 ವರ್ಷ ಮೇಲ್ಪಟ್ಟವರು 532 ಮತದಾರರಿದ್ದಾರೆ. ಇದರೊಂದಿಗೆ 13,943 ಅಂಗ ವಿ ಕ ಲರು ಮತದಾನದ ಹಕ್ಕು ಹೊಂದಿದ್ದಾರೆ. ಇವರಲ್ಲಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಸಾಧ್ಯವಾಗದವರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಮಾಡಲಾಗುತ್ತದೆ.

ಚುನಾವಣೆ ಘೋಷಣೆ ಆದ ಬಳಿಕ ಮನೆಯಿಂದಲೇ ಮತದಾನ ಬಯಸುವವರಿಗೆ ಫಾರಂ (ನಮೂನೆ) ಭರ್ತಿಗೆ ನೀಡಲಾಗುತ್ತದೆ. ಅದರಂತೆ ಮತಗಟ್ಟೆಗೆ ಬರಲು ಸಾಧ್ಯವಾಗದವರಿಗೆ ಪರಿಶೀಲನೆ ನಡೆಸಿ ಮನೆಯಿಂದಲೇ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮತಗಟ್ಟೆಗೆ ಬಂದು ಮತದಾನ ಮಾಡುವ ಹಿರಿಯ ನಾಗರಿಕರು, ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡುವ ಬಗ್ಗೆಯೂ ಜಿಲ್ಲಾಡಳಿತ ನಿರ್ಧಾರ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next