Advertisement

ಮಾತಿನ ಮತ, ಸಂದರ್ಶನ

01:01 PM Mar 23, 2018 | Team Udayavani |

ಅಭ್ಯರ್ಥಿ ಯಾರು ಎಂಬುದಲ್ಲ ; ಬಿಜೆಪಿ ಗೆಲುವೇ ಮುಖ್ಯ

Advertisement

ಯಾವ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ?
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್‌ ಆಧಾರಿತ ವಾಗಿ ಪ್ರಚಾರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸುರತ್ಕಲ್‌ನಲ್ಲಿ 2, ಕಾವೂರಿನಲ್ಲಿ 2, ನೀರುಮಾರ್ಗ, ಗುರುಪುರ, ಎಡಪದವಿನಲ್ಲಿ ತಲಾ ಒಂದೊಂದು ಮಹಾಶಕ್ತಿ ಕೇಂದ್ರವನ್ನು ರಚಿಸಲಾಗಿದೆ. ಇದರ ಉಸ್ತುವಾರಿಗೆ ಶಕ್ತಿ ಕೇಂದ್ರ ಪ್ರಮುಖರನ್ನು ನೇಮಿಸಿ ಜವಾಬ್ದಾರಿ ನೀಡಲಾಗಿದೆ.

ಬಿಜೆಪಿಯಿಂದ ಮಂಗಳೂರು ಉತ್ತರದಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭ ಆಗಿದೆಯೇ?
ಈಗಾಗಲೇ ಒಂದು ಸುತ್ತಿನ ಮನೆ ಮನೆ ಭೇಟಿಯನ್ನು ಮಂಗಳೂರು ಉತ್ತರದಲ್ಲಿ ನಡೆಸಲಾಗಿದೆ. ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ಈ ಹಂತದಲ್ಲಿ ನಡೆದಿದೆ. ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ನಾಲ್ಕರಿಂದ 6 ಬೂತ್‌ ಗಳಿಗೆ ಸರಿಯಾಗಿ ಒಂದೊಂದರಂತೆ ಒಟ್ಟು 49 ಶಕ್ತಿ ಕೇಂದ್ರಗಳನ್ನು ರಚಿಸಲಾಗಿದೆ. ಇದರ ಪ್ರಮುಖರು ಹಾಗೂ ಬೂತ್‌ ಮಟ್ಟದ ಪ್ರಮುಖರು ಮನೆ ಮನೆ ಭೇಟಿಗೆ ವಿಶೇಷ ಒತ್ತು ನೀಡುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ.

ಅಭ್ಯರ್ಥಿ ಯಾರು ಎಂಬುದು ನಿರ್ಧರಿತವಾಗಿದೆಯೇ? ಆಯ್ಕೆಯಲ್ಲಿ ಗೊಂದಲ ಇದೆಯೇ?
ಯಾವುದೇ ಗೊಂದಲ ಇಲ್ಲ ಹಾಗೂ ಬಿಜೆಪಿಗೆ ಯಾರು ಅಭ್ಯರ್ಥಿ ಎಂಬುದು ಮುಖ್ಯವಲ್ಲ; ಪಕ್ಷ ಮಾತ್ರ ಮುಖ್ಯ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೂ ಸ್ಪರ್ಧಿಸಲು ಅವಕಾಶ ಸಿಗಬಹುದು. ಹೀಗಾಗಿ ಯಾರಿಗೆ ಅವಕಾಶ ಸಿಕ್ಕಿದರೂ ಪಕ್ಷವನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ.

ನಿಮ್ಮ ಪ್ರಚಾರ ಕಾರ್ಯದಲ್ಲಿ ಯಾವ ವಿಷಯ ಮುಖ್ಯ?
ಮಂಗಳೂರು ಉತ್ತರದಲ್ಲಿ ಶಾಸಕ ಮೊಯಿದಿನ್‌ ಬಾವಾ ಅವರ ದುರಾಡಳಿತಕ್ಕೆ ಉತ್ತರ ನೀಡಲಿದ್ದೇವೆ ಹಾಗೂ ಹಿಂದುತ್ವವೇ ಮುಂದಿನ ಚುನಾವಣೆಯಲ್ಲಿ ನಮ್ಮ ಮುಖ್ಯ ಅಜೆಂಡಾವಾಗಿದೆ. ಕಳೆದ ಕೆಲವು ವರ್ಷಗಳಿಂದ ಮಂಗಳೂರು ಉತ್ತರ ಭಾಗ ಸಹಿತ ಕರಾವಳಿ ಭಾಗದಲ್ಲಿ ಹಿಂದೂಗಳ ಮೇಲೆ ಆಗಿರುವ ದಾಳಿಗೆ ಚುನಾವಣೆಯಲ್ಲಿ ಮತದಾರರು ಉತ್ತರ ನೀಡಲಿದ್ದಾರೆ.

Advertisement

ಕಾಂಗ್ರೆಸ್‌ನ ಶಕ್ತಿ ಪ್ರದರ್ಶನ ಈಗಾಗಲೇ ಇಲ್ಲಿ ನಡೆದಿದೆ. ಬಿಜೆಪಿ ಮುಂದಿನ ಪ್ರಚಾರ ತಂತ್ರ ಹೇಗಿರಲಿದೆ?
ಬಹುತೇಕ ಪ್ರಚಾರ ಕಾರ್ಯಗಳು ಮನೆ ಮನೆಗೆ ತೆರಳುವ ಮೂಲಕವೇ ನಡೆಯುತ್ತವೆ. ದೊಡ್ಡ ದೊಡ್ಡ ಸಭೆಗಳನ್ನು ನಡೆಸುವ ಬದಲು ಮನೆ ಮನೆಗೆ ತೆರಳಿ ಮತದಾರರ ಮನಸ್ಸು ಗೆಲ್ಲುವುದಕ್ಕೆ ವಿಶೇಷ ಆದ್ಯತೆ ನೀಡಲಿದ್ದೇವೆ. ಜತೆಗೆ ರಾಜ್ಯ ಹಾಗೂ ಕೇಂದ್ರದಿಂದ ಬಿಜೆಪಿ ಮುಖಂಡರು ನಮ್ಮ ಬಳಿಗೆ ಬಂದು ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ, ಮಾರ್ಗದರ್ಶನ ನಡೆಸಲಿದ್ದಾರೆ.

 ಇರಾ

Advertisement

Udayavani is now on Telegram. Click here to join our channel and stay updated with the latest news.

Next