Advertisement

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

04:29 PM Apr 24, 2024 | Team Udayavani |

2024ರ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮಾಧ್ಯಮ ಅನೇಕ ಸಂಸ್ಥೆ “ವೋಟು ನಮ್ಮ ಪವರ್‌’ ಎಂಬ ರ್‍ಯಾಪ್ ಸಾಂಗ್‌ ಬಿಡುಗಡೆಗೊಳಿಸಿದೆ.

Advertisement

ಪ್ರಜಾ  ಪ್ರಭುತ್ವದ ಹಬ್ಬವನ್ನು ಒಂದು ಸಂದೇಶಭರಿತ ರ್‍ಯಾಪ್ ಸಾಂಗ್‌ ಮೂಲಕ ಸಂಭ್ರಮಿಸುವ ಆಶಯ ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನಕ್ಕೆ ಅವರನ್ನು ಪ್ರೇರೇಪಿಸುವುದು ಈ ಹಾಡಿನ ಉದ್ದೇಶ ಉದ್ದೇಶ ಎನ್ನುವುದು ನಿರ್ದೇಶಕ ರಾಜ್‌ ಗೋಪಿ ಮಾತು.

ಮೊದಲ ಬಾರಿಗೆ ಮತದಾನ ಮಾಡುವವರಿಗೆ ಈ ಹಾಡು ಬಹಳ ಇಷ್ಟವಾಗ ಬಹುದು. ಯುವಜನತೆ ಹೆಚ್ಚಾಗಿ ಮತದಾನ ಮಾಡಬೇಕು ಎಂದರು ಹಾಡಿಗೆ ದನಿಯಾಗಿರುವ ನಟ ರಾಕೇಶ್‌ ಅಡಿಗ. ಹಾಡಿಗೆ ಹೆಜ್ಜೆ ಹಾಕಿರುವ ನಟಿ ತೇಜಸ್ವಿನಿ ಶರ್ಮ, ನಟ ಗುರು ರಕ್ಷಿತ್‌ ಹಾಗೂ ನೃತ್ಯ ನಿರ್ದೇಶನ ಮಾಡಿರುವ ನಟಿ ಅನನ್ಯ ಅರ್ಮ, ಮಾಧ್ಯಮ ಅನೇಕ ಸಂಸ್ಥೆಯ ಡಾ ನಮನ ಹಾಡಿನ ಆಶಯದ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next