Advertisement

ಕಡ್ಡಾಯವಾಗಿ ಮತದಾನ ಮಾಡಿ: ವಾಟ್ಕರ

03:37 PM Dec 29, 2017 | Team Udayavani |

ಯಾದಗಿರಿ: ದಾನಗಳಲ್ಲಿ ಶ್ರೇಷ್ಠ ದಾನ ಮತದಾನವಾಗಿದೆ. ಅದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ
ಮತದಾರರು ಮತದಾನ ಮಾಡಬೇಕು ಎಂದು ಪ್ರಾಧ್ಯಾಪಕ ನಾಮದೇವ ವಾಟ್ಕರ್‌ ಹೇಳಿದರು. ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಆಯೋಜಿಸಲಾಗಿದ್ದ ಕಡ್ಡಾಯ ಮತದಾನದ ಬಗ್ಗೆ ಅವರು ಮಾತನಾಡಿದರು.

Advertisement

ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿವೆ. ಆದರೆ ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾನದ ಪ್ರತಿಶತ ಹೆಚ್ಚಿಗೆ ಆಗಿಲ್ಲ. ಇದಕ್ಕೆ ಮೂಲ ಕಾರಣ ಉದಾಶೀನತೆಯಾಗಿದೆ. ಜನರಲ್ಲಿರುವ ಉದಾಶೀನತೆ ತೊಲಗಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ಯುವಕರು ಗ್ರಾಮಸ್ಥರಲ್ಲಿ ಮತದಾನದ ಬಗ್ಗೆ ಜಾಗೃತಿ
ಮೂಡಿಸಬೇಕು ಎಂದು ಹೇಳಿದರು.

ಹದಿನೆಂಟು ವರ್ಷದ ಯುವಕರು ತಹಶೀಲ್ದಾರ ಕಚೇರಿ ಅಥವಾ ನಾಡ ಕಚೇರಿಗೆ ಹೋಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವ ಅರ್ಜಿ ಸಲ್ಲಿಸಬೇಕು. ನಿಮ್ಮ ಕುಟುಂಬದವರು, ಅಕ್ಕ ಪಕ್ಕದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರದಿದ್ದರೆ ಅವುಗಳನ್ನು ಸಹ ಸೇರ್ಪಡೆ ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಉಪನ್ಯಾಸಕ ಗಣಪತಿ ಪೂಜಾರಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕರು ತಮ್ಮ ವಿರಾಮದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಸಂಚರಿಸಿ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮುಂಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ನೆಹರು ಮೈಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರ್ಥಿಗಳಾದ
ಶಿವರಡ್ಡಿ, ಮರೆಪ್ಪ , ವೆಂಟಕೇಶ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಹಿರಿಯ ಉಪನ್ಯಾಸಕರಾದ ಸಿದ್ರಾಮಪ್ಪ ಅನವಾರ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next