ಶಿಮ್ಲಾ: “ನಿಮ್ಮ ಉದ್ಯಾನವನ್ನು ಕಾವಲು ಕಾಯಲು ನೀವು ಉತ್ತಮ ಮಾಲಿಗಳನ್ನೇ ಆಯ್ಕೆ ಮಾಡುತ್ತೀರಿ ಅಲ್ಲವೇ? ಅಂತೆಯೇ 12ರ ಚುನಾವಣೆಯಲ್ಲಿ “ರಕ್ಷಣೆ’ಗೆ ಮತ ನೀಡಬೇಕೇ ಹೊರತು “ಭಾವನೆ’ಗಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಿಮಾಚಲಪ್ರದೇಶದ ಮತದಾರರಿಗೆ ಕರೆ ನೀಡಿದ್ದಾರೆ.
ರಾಂಪುರದಲ್ಲಿ ಬಿಜೆಪಿ ಅಭ್ಯರ್ಥಿ ಕೌಲ್ ಸಿಂಗ್ ಪರ ಪ್ರಚಾರದ ವೇಳೆ ಸಾರ್ವಜನಿಕ ರ್‍ಯಾಲಿಯಲ್ಲಿ ಅವರು ಮಾತನಾಡಿದರು. ಕೌಲ್ ಅವರು ಕಳೆದ ಚುನಾವಣೆಯಲ್ಲಿ ಸೋತರೂ, ಈ ಕ್ಷೇತ್ರದ ಜನರ ಹಿತಾಸಕ್ತಿಗಾಗಿ 3 ವರ್ಷಗಳಿಂದ ದುಡಿಯುತ್ತಿದ್ದಾರೆ. ಅವರು ನಿಮ್ಮ ಚೌಕಿದಾರ. ಅವರಿಗೆ ಮತ ನೀಡಿ ಎಂದಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರೂ ಹಿಮಾಚಲದಲ್ಲಿ ರ್‍ಯಾಲಿ ನಡೆಸಿದ್ದು, ಕಳೆದ 5 ವರ್ಷಗಳಿಂದ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಇಲ್ಲಿದೆ. ಆದರೆ, ಬಹುಶಃ ಎಂಜಿನ್‌ಗೆ ಇಂಧನ ಹಾಕಲು ಮರೆತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.