Advertisement

ಅಭಿವೃದ್ಧಿಗೆ ತಪ್ಪದೇ ಮತದಾನ ಮಾಡಿ

03:15 PM Mar 22, 2018 | Team Udayavani |

ಹುಮನಾಬಾದ: ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ
ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕು ಎಂದು ತಹಸೀಲ್ದಾರ ಚನ್ನಮಲ್ಲಪ್ಪ ಘಂಟೆ ಹೇಳಿದರು.

Advertisement

ಪಟ್ಟಣದ ಸರ್ವೋದಯ ಪದವಿ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಲಾಗಿದ್ದ ಮತದಾನದ ಮಹತ್ವ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಹೊಂದಿದವರು ತಪ್ಪದೆ ಮತ ಚಲಾವಣೆಗೆ ಮುಂದಾಗಬೇಕು ಎಂದು ಹೇಳಿದರು.

ಚುನಾವಣಾ ತರಬೇತಿ ಸಂಪನ್ಮೂಲ ವ್ಯಕ್ತಿ ಮಾಣಿಕಪ್ಪ ಬಕ್ಕನ್‌ ಮಾತನಾಡಿ, ಹದಿನೆಂಟು ವರ್ಷ ಮೇಲ್ಪಟ್ಟಿರುವ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ. ಇವಿಎಮ್‌ ಕುರಿತು ಕೆಲ ವಿವಾದಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಈ ಸಲದ ಚುನಾವಣೆಯಲ್ಲಿ ಮತದಾನ ಖಾತ್ರಿ ಯಂತ್ರವೊಂದನ್ನು ಅಳವಡಿಸಲಾಗಿದೆ. 

ಒಬ್ಬ ವ್ಯಕ್ತಿ ಚಲಾಯಿಸಿದ ಮತ ಯಾರಿಗೆ ಎಂಬುವುದು ಕುರಿತು ಖಾತ್ರಿ ಯಂತ್ರದಲ್ಲಿ ತೊರಿಸಲಾಗುತ್ತದೆ. ಅದು ಕೇವಲ 7 ಸೆಕೆಂಡ್‌ ಪ್ರದರ್ಶನಗೊಂಡು ನಂತರ ಬಾಕ್ಸ್‌ಗೆ ಭದ್ರವಾಗಿ ಸೇರ್ಪಡೆಗೊಳ್ಳುತ್ತದೆ ಎಂದು ಚುನಾವಣೆ ಪದ್ಧತಿಗಳ ಕುರಿತು ಹೊಸ ಮತದಾರರಾದ ಪದವಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಸಂಘದ ತಾಲೂಕು ಅಧ್ಯಕ್ಷ ದುರ್ಯೋಧನ ಹೂಗಾರ ಮಾತನಾಡಿ, ಯುವಕರು ತಪ್ಪದೇ ಮತ ಚಾಲಾಯಿಸಬೇಕು. ಜತೆಯಲ್ಲಿ ತಮ್ಮ ಕುಟುಂಬ ಹಾಗೂ ತಮ್ಮ ಸುತ್ತ ಮುತ್ತಲಿನ ಮತದಾರರಿಗೂ ಮತದಾನದ ಮಹತ್ವ ತಿಳಿಸುವ ಮೂಲಕ ತಪ್ಪದೇ ಮತ ಚಾಲಾವಣೆಗೆ ಪ್ರೇರಣೆ ನೀಡುವ ಕೆಲಸ ಯುವ ಜನರು ಮಾಡಬೇಕಾಗಿದೆ. ಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಯುವ ಜನರು ಜಾಗೃತಿಗೆ ಮುಂದಾಗಬೇಕು. ಕುಂಟುನೆಪ ಹೇಳಿ ಮತದಾನದಿಂದ ಜಾರಿಕೊಳ್ಳುವ ವ್ಯಕ್ತಿಗಳಿಗೂ ಅರಿವು ನೀಡುವ ಮೂಲಕ ಕಡ್ಡಾಯ ಮತದಾನಕ್ಕೆ ಪಣತೊಡಬೇಕು. ಒಂದು ಮತದಿಂದ ಒಂದು ಕ್ಷೇತ್ರದ ಉತ್ತಮ ವ್ಯಕ್ತಿ ಜಯಗಳಿಸಬಹುದು. ಅಥವಾ ಸೋಲು ಅನುಭವಿಸಬಹುದು. ಒಂದು ಮತಕ್ಕೂ ಹೆಚ್ಚಿನ ಬೆಲೆ ಇದೆ ಎಂದು ಹೇಳಿದರು.

Advertisement

ಸಂಸ್ಥೆ ಅಧ್ಯಕ್ಷ ಶಾಂತವೀರ ಯಲಾಲ, ಪತ್ರಕರ್ತರಾದ ಶಶಿಕಾಂತ ಭಗೋಜಿ, ಸಂಜಯ ದಂತಕಾಳೆ, ವೀರೇಶ ಮಠಪತಿ, ಶೈಲೇಂದ್ರ ಕವಾಡಿ, ರಮೇಶರೆಡ್ಡಿ ಉಸ್ತೆಲಿ, ಎಂ.ಡಿ. ರಿಜಾವನ್‌, ಸಂಸ್ಥೆ ಸಿಬ್ಬಂದಿ ಗಣೇಶಸಿಂಗ್‌ ತಿವಾರಿ, ಆನಂದ, ಶಿಲ್ಪಾ ಶೇರಿಕರ್‌, ಶಿವಲಿಲಾ, ತುಕಾರಾಂ, ಪಲ್ಲವಿ, ಸಂಗೀತಾ ಮಠಪತಿ, ಗೌರಮ್ಮ ಮಠಪತಿ, ಶೃತಿರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next