Advertisement

“ಮತಕ್ಷೇತ್ರ ವಿದ್ಯಾಕಾಶಿಯನ್ನಾಗಿಸುವೆ”

09:56 AM Oct 12, 2021 | Team Udayavani |

ಕಮಲಾಪುರ: ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ 22.56 ಕೋಟಿ ರೂ. ವೆಚ್ಚದ ಇಂದಿರಾ ಗಾಂಧಿ ವಸತಿ ಶಾಲೆಯ ಕಟ್ಟಡದ ಭೂಮಿಪೂಜೆ ಮತ್ತು ಮಹಾಗಾಂವ ಕ್ರಾಸ್‌ನಲ್ಲಿ 1.23 ಕೋಟಿ ರೂ. ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಅಡಿಗಲ್ಲನ್ನು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಸೋಮವಾರ ನೆರವೇರಿಸಿದರು.

Advertisement

ನಂತರ ಮಾತನಾಡಿದ ಅವರು, ನಾನು ಶಾಸಕ ಆದ ದಿನದಿಂದಲೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲನೆಯ ಆದ್ಯತೆ ನೀಡುತ್ತಿರುವೆ. ಈ ಭಾಗದಲ್ಲಿ ಹೆಚ್ಚಿನ ಶಾಲೆಗಳು ಪ್ರಾರಂಭಿಸಿ, ನನ್ನ ಮತಕ್ಷೇತ್ರವನ್ನು ವಿದ್ಯಾಕಾಶಿಯಾಗಿ ಪರಿವರ್ತಿಸುವ ಇಚ್ಛೆ ಇದೆ ಎಂದರು.

ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರ ಇಚ್ಚಾಶಕ್ತಿಯಿಂದ ನನ್ನ ಮತಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದ ಶಾಲೆ ಪ್ರಾರಂಭವಾಗುತ್ತಿದೆ. ಈ ಶಾಲೆಯಿಂದ ಬಡ ಹಾಗೂ ಶ್ರಮಿಕ ವರ್ಗದ ಮಕ್ಕಳಿಗೆ ಅನುಕೂಲ ಆಗುತ್ತೆ ಅನ್ನುವ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅತಿವೃಷ್ಟಿಗೆ ಸಂಪೂರ್ಣ ಹಾಳಾದ ಬೆಳೆ: ಪರಿಹಾರಕ್ಕೆ ಭೂಸನೂರ ಆಗ್ರಹ

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಮರನಾಥ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಗ್ರಾಪಂ ಅಧ್ಯಕ್ಷರಾದ ನರೇಶ ಹರಸೂರಕರ, ಗಣೇಶ ಚಿಕ್ಕನಾಗಾಂವ, ಪ್ರಮುಖ ಮುಖಂಡರಾದ ರವಿ ಬಿರಾದಾರ, ಬಸವರಾಜ ಪಾಟೀಲ, ಸಿದ್ದಣಗೌಡ ಪಾಟೀಲ, ಹರ್ಷವರ್ಧನ ಗೂಗಳೆ, ಸುಭಾಷ ಬಿರಾದಾರ, ಸಂಗಮೇಶ ವಾಲಿ, ಶರಣಬಸಪ್ಪ ಪಾಟೀಲ ಅಷ್ಟಗಿ, ಮಲ್ಲಿಕಾರ್ಜುನ ಮರತೂರಕರ, ರಾಜಕುಮಾರ ಕೋಟೆ, ಗಿರೀಶ ಪಾಟೀಲ ಶಾಂತಬಾಯಿ ಚೇಂಗಟಿ, ಯೂನುಸ್‌ ಪಟೇಲ, ಹಣಮಂತ, ಮಂಜುನಾಥ ಬಾಳಿ, ಭಾಗ್ಯವಂತ ಕವನಳ್ಳಿ, ಸಂಜುಕುಮಾರ, ಅನಿಲ ಬಬಲಾದ, ಶಾಂತವೀರ ಹೋಳಕುಂದಾ, ಚನ್ನವೀರ ಹಿರೇಮಠ, ದೇಶಮುಖ, ಅಜರ ಪಟೇಲ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next