Advertisement

ವರುಣಾ ಕ್ಷೇತ್ರದಲ್ಲಿ ರವಿಶಂಕರ್‌ ಪರ ಮತಯಾಚನೆ

02:31 PM Jun 11, 2022 | Team Udayavani |

ಮೈಸೂರು: ದಕ್ಷಿಣ ಪದವೀಧರರಿಂದ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್‌ ಪರವಾಗಿ ವರುಣಾ ಕ್ಷೇತ್ರದಲ್ಲಿ ಮತಯಾಚಿಸಿದರು.

Advertisement

ಈ ಸಂದರ್ಭ ಮಾತನಾಡಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ರವಿಶಂಕರ್‌ ವೃತ್ತಿಯಲ್ಲಿ ಜಿಯೋಲಾ ಜಿಸ್ಟ್ ಆಗಿದ್ದು, ಪಕ್ಷದಲ್ಲಿ ಮೈಸೂರು ಭಾಗದ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳು ಹಾಗೂ ಯಡಿಯೂರಪ್ಪ ನ ವರು ರಾಜ್ಯಕ್ಕೆ ಹತ್ತಾರು ಯೋಜನೆಗಳನ್ನು ನೀಡಿದ್ದು, ಇಂದಿನ ಮುಖ್ಯ ಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಯೋಜನೆಗಳನ್ನು ನೀಡಿದ್ದಾರೆ ಎಂದರು. ‌

ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ ಮಾತ ನಾಡಿ, ರವಿಶಂಕರ್‌ ಸರಳ ಸಜ್ಜನ ಅಭ್ಯರ್ಥಿಯಾಗಿದ್ದು, ಬಿಜೆಪಿಯಲ್ಲಿ 35 ವರ್ಷಗಳಿಂದ ಕಾರ್ಯಕರ್ತರಾಗಿ ನಾನಾ ಹುದ್ದೆಗಳನ್ನು ನಿಬಾಯಿದ್ದಾರೆ. ಕಳೆದ ಬಾರಿ ಇದೇ ಚುನಾವಣೆಯಲ್ಲಿ 183 ಮತಗಳಿಂದ ಪರಭಾವ ಗೊಂಡಿದ್ದು ಈ ಬಾರಿ ಅವರನ್ನು ಮೊದಲ ಪ್ರಾಶಸ್ತ್ಯ ಮತನೀಡಿ ಗೆಲ್ಲಿಸಬೇಕೆಂದು ಕೇಳಿಕೊಂಡರು.

ಮೈಸೂರು ತಾಲೂಕಿನ ವರುಣ ಕ್ಷೇತ್ರದ ಸುತ್ತೂರು ಶಾಲೆಗಳಲ್ಲಿ, ಹೊಸಕೋಟೆಯ ಶಾಲೆಗಳಲ್ಲಿ ಮತಯಾಚನೆ ಮಾಡಲಾಯಿತು. ಮೈಮುಲ್‌ ನಿರ್ದೇಶಕ ಎಸ್‌.ಸಿ. ಅಶೋಕ್‌, ಜೆಎಸ್‌ಎಸ್‌ ಪ್ರಾಂಶುಪಾಲ ತ್ರಿಪುರಂಕ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next