Advertisement

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

03:12 PM May 04, 2024 | Team Udayavani |

ಮತದಾನವೆಂಬುದು ಸಂವಿಧಾನವು ಪ್ರಜೆಗಳಿಗೋಸ್ಕರ ಕಲ್ಪಿಸಿರುವ ಹಕ್ಕು. ಪ್ರಜೆಗಳೇ ತಮ್ಮ ಇಚ್ಚೆಯನುಸಾರ ನಾಯಕನನ್ನು ಆಯ್ಕೆ ಮಾಡಿ ತಮ್ಮ ಕ್ಷೇತ್ರ ಅಭಿವೃದ್ಧಿಪಡಿಸುವ ಸಲುವಾಗಿ, ತಮ್ಮ ಕ್ಷೇತ್ರದ ಪರವಾಗಿ ಸಂಸತ್ತಿಗೆ ಕಳಿಸುವ ಆಯ್ಕೆ ಇದಾಗಿದೆ. ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಹೌದು.

Advertisement

ದೇಶದಲ್ಲಿ ವಿವಿಧ ಹಂತಗಳಲ್ಲಿ ಲೋಕಸಭೆ ಚುನಾವಣೆಯ ಮತದಾನ ಈಗಾಗಲೇ ಆರಂಭವಾಗಿದ್ದು, 18 ವರ್ಷ ಮೇಲ್ಪಟ್ಟ ನಾಗರಿಕರು ತಮಗೆ ಸಂವಿಧಾನದತ್ತವಾಗಿ ಲಭಿಸಿರುವ ಮತದಾನದ ಹಕ್ಕುನ್ನು ಜವಾಬ್ದಾರಿಯಿಂದ ಅತ್ಯಗತ್ಯವಾಗಿ ಚಲಾಯಿಸಬೇಕಾಗಿದೆ. ದೇಶದಲ್ಲಿ ಚುನಾವಣೆ, ಮತದಾನದ ಪ್ರಾಮುಖ್ಯತೆ ಕುರಿತು ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಎಲ್ಲರೂ ಮತಹಾಕುವಂತೆ ಮಾಡುವಲ್ಲಿ ಮಾತ್ರ ವಿಫ‌ಲರಾಗಿದ್ದೇವೆ.

2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟರೆ ಶೇ. 67.40ರಷ್ಟು ಮತದಾನವಾಗಿತ್ತು. ಚುನಾವಣ ಆಯೋಗದ ಸ್ವೀಪ್‌ನಂಥ ಕಾರ್ಯಕ್ರಮಗಳು ಹಾಗೂ ಮತದಾನಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಕೈಗೊಂಡಿರುವ ವಿವಿಧ ಕ್ರಮಗಳಿಂದಾಗಿ ಕಳೆದ ಕೆಲವು ಚುನಾವಣೆಗಳಲ್ಲಿ ಮತದಾನ ಪ್ರಮಾಣ ಹೆಚ್ಚುತ್ತಿರುವುದು ಕಂಡು ಬಂದಿದೆ.

ನಿರ್ಧಿಷ್ಟವಾಗಿ ವಿದ್ಯಾವಂತ ಮತದಾರರಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಲು ಮಾಡಿರುವ ಪ್ರಯತ್ನಗಳು ಶ್ಲಾಘನೀಯ. ಅದೇ ರೀತಿ ಯಾವುದೇ ಆಮಿಷಗಳಿಗೆ ಒಳಗಾಗಿ ಮತದಾನ ಮಾಡುವುದರಿಂದ ದೇಶದ ಪ್ರಗತಿಗೆ ಶೋಭೆ ತರುವುದಿಲ್ಲ. ಮತದಾನ ಹಕ್ಕನ್ನು ಚಲಾಯಿಸದಿದ್ದರೆ ಅವರ ಕರ್ತವ್ಯದಿಂದ ವಂಚಿತರಾಗುವುದು ಮಾತ್ರವಲ್ಲದೆ ಸಂವಿಧಾನಕ್ಕೂ ಅಪಮಾನ ಮಾಡಿದಂತೆ.

ಮತದಾನ ಮಾಡುವುದರಿಂದ ತಮ್ಮ ಕ್ಷೇತ್ರಗಳ ಅಭಿವೃದ್ಧಿಯ ಜತೆಗೆ ದೇಶದ ಪ್ರಗತಿಗೂ ಕೊಡುಗೆ ನೀಡಿದಂತಾಗುತ್ತದೆ. ಹೇಗೆಂದರೆ ಸೂಕ್ತ ಅಭ್ಯರ್ಥಿಗಳನ್ನು ಅಯ್ಕೆ ಮಾಡದಿದ್ದರೆ ಕೇವಲ ನೆಪ ಮಾತ್ರಕ್ಕೆ ಸಂಸತ್ತಿನಲ್ಲಿ ಕೂರುವರು ಹೊರತು ಅಭಿವೃದ್ಧಿಯ ಕ್ರಿಯಾಶೀಲತೆ ಅವರಿಗಿರುವುದಿಲ್ಲ.

Advertisement

ಮತದಾನ ಮಾಡುವ ಸಲುವಾಗಿ ಯಾವುದೆ ರೀತಿಯ ಹಣ ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸಿದರೆ ಅದು ನಿಮ್ಮನ್ನು ನೀವೇ ಮಾರಾಟ ಮಾಡಿಕೊಂಡಂತೆ ಹಾಗೇ ನಿಮಗೆ ಹಣ ನೀಡಿ ಗೆಲ್ಲುವ ಅಭ್ಯರ್ಥಿಯು ತಾನು ಚುನಾವಣೆಯಲ್ಲಿ ಖರ್ಚುಮಾಡಿದ ಹಣವನ್ನು ಪಡೆಯುವ ಸಲ್ಲವಾಗಿ ಯೋಚನೆ ಮಾಡುತ್ತಾನೆ ಹೊರತು, ಕ್ಷೇತ್ರದ ಅಭಿವೃದ್ಧಿ ಮತ್ತು ದೇಶದ ಏಳಿಗೆಯ ಕಡೆಗೆ ಗಮನನೀಡುವುದಿಲ್ಲ.

ಅದ್ದರಿಂದ ಮತದಾನ ಮಾಡುವ ಮೊದಲು ಯಾರೆಂದು ತಿಳಿದು ಮತದಾನ ಮಾಡುವ ಮೂಲಕ ಸೂಕ್ತ ವ್ಯಕ್ತಿಯನ್ನು ಸಂಸತ್ತಿಗೆ ಕಳುಹಿಸಿ ದೇಶದ ಪ್ರಗತಿಗೆ ಪಾತ್ರವಾಗಬೇಕು. ತಪ್ಪದೆ ಮತದಾನ ಮಾಡುವ ಮುಲಕ ದೇಶದ ಪ್ರಗತಿಯಲ್ಲಿ ಕೈಜೋಡಿಸೋಣ ಅರ್ಹ ಅಭ್ಯರ್ಥಿಯನ್ನು ಆಯ್ಕೆಮಾಡಿ ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸೋಣ.

ನಿತಿನ್‌

ಎಸ್‌ಡಿಎಂ, ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next