Advertisement

ವಾಂತಿಬೇಧಿ: ವ್ಯಕ್ತಿ ಸಾವು, 13 ಮಂದಿ ಆಸ್ಪತ್ರೆಗೆ

08:51 PM Mar 18, 2020 | Lakshmi GovindaRaj |

ಬಾಗೇಪಲ್ಲಿ: ಕೊರೊನಾ ಹಾವಳಿಯಿಂದ ವಿಶ್ವವೇ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಪಂ ವ್ಯಾಪ್ತಿ ಅಗಟಮಡಕ ಗ್ರಾಮದಲ್ಲಿ ವಾಂತಿಬೇಧಿಯಿಂದ ವೆಂಕಟರಾಮಪ್ಪ(70)ಮೃತಪಟ್ಟಿದ್ದು 13 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 10 ದಿನಗಳಿಂದ ವಾಂತಿಬೇಧಿ ಪ್ರಕರಣ ಕಾಣಿಸಿಕೊಂಡಿದ್ದು ಬುಧವಾರ ನಾಲ್ವರು ಸಾರ್ವಜನಿಕ ಆಸ್ಪತೆಗೆ ದಾಖಲಾಗಿದ್ದಾರೆ.

Advertisement

ಸ್ಟೀಲ್‌ ಕೊಳಗದಲ್ಲಿ ನೀರು ಸೇವನೆ: ರಮ್ಯಾ(5), ರಾಜೇಶ್ವರಿ(30), ಇನ್ನಿತರರು ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯವಿಲ್ಲದೆ ಗುಣುಮುಖರಾಗುತ್ತಿದ್ದಾರೆ. ಉಳಿದಂತೆ 10 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ. ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇಲ್ಲದೆ ಇರುವುದರಿಂದ ಗ್ರಾಮಸ್ಥರು ಕೊಳವೆ ಬಾವಿಗಳ ನೀರನ್ನೇ ಕುಡಿಯುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಸ್ಟೀಲ್‌ ಕೊಳೆಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು ಇವುಗಳ ಕಿಲುಬು ನೀರಿನಲ್ಲಿ ಸೇರಿ ವಾಂತಿಬೇಧಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ವೈದ್ಯರ ತಂಡ ಆಗಮನ: ಗ್ರಾಮಕ್ಕೆ ವೈದ್ಯರ ತಂಡ ಆಗಮಿಸಿ ಮಿನಿ ವಾಟರ್‌ ಟ್ಯಾಂಕ್‌ಗೆ ಬ್ಲೀಚಿಂಗ್‌ ಪೌಡರ್‌ ಹಾಕಿ ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುತ್ತಿದೆ. ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್‌.ಸತ್ಯನಾರಾಯಣರೆಡ್ಡಿ, 70 ವರ್ಷದ ವೃದ್ಧ ವೆಂಕಟರಾಮಪ್ಪ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವೈದ್ಯಕೀಯ ಸಿಬ್ಬಂದಿ ಆಗಮಿಸಿದ್ದು ಅರಿವು ಮೂಡಿಸಲಾಗುತ್ತಿದೆ ಎಂದರು.

ನೀರು ಶುದ್ಧೀಕರಣ ಘಟಕವಿಲ್ಲ: ಅಗಟಮಡಕ ಗ್ರಾಮದಲ್ಲಿ 150 ಮನೆಗಳಿದ್ದು 800 ಜನಸಂಖ್ಯೆ ಹೊಂದಿ ಶುದ್ಧ ನೀರಿನ ಘಟಕವಿಲ್ಲ ಎಂದು ಗ್ರಾಮದ ಮುಖಂಡ ಅಗಟಮಡಕ ಎ.ವಿ.ಸತ್ಯನಾರಾಯಣಪ್ಪ (ಸತ್ಯಣ್ಣ) ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next