Advertisement
ಬೇಸಿಕ್ ಮಾಡೆಲ್ ಎನಿಸಿರುವ ಕಂಫರ್ಟ್ ಲೈನ್‌ನ ಎಕ್ಸ್ ಷೋ ರೂಂ ಬೆಲೆ 10.49 ಲಕ್ಷ ರೂ. ಆಗಿದ್ದರೆ, ಟಾಪ್ ಎಂಡ್ ಎನಿಸಿರುವ ಪರ್ಫಾಮನ್ಸ್ ಜಿಟಿ ಪ್ಲಸ್ ಕಾರಿನ ಬೆಲೆ 17.49 ಲಕ್ಷ ರೂ. ಇರುವುದಾಗಿ ಕಂಪನಿ ಪ್ರಕಟಿಸಿದೆ.
ಭೂಸೇನೆಗೆ 7,523 ಕೋಟಿ ರೂ. ವೆಚ್ಚದಲ್ಲಿ 118 ಯುದ್ಧ ಟ್ಯಾಂಕ್‌ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ಇದರಿಂದಾಗಿ ಭೂಸೇನೆಯ ಶಕ್ತಿ ಮತ್ತಷ್ಟು ವೃದ್ಧಿಯಾಗಲಿದೆ. ಚೆನ್ನೈನ ಆವಡಿಯಲ್ಲಿರುವ ಹೆವಿ ವೆಹಿಕಲ್ ಫ್ಯಾಕ್ಟರಿ (ಎಚ್ ವಿಎಫ್)ಯಲ್ಲಿ ಅರ್ಜುನ ಎಂಕೆ-1ಎ ಯುದ್ಧ ಟ್ಯಾಂಕ್ ಗಳನ್ನು ಉತ್ಪಾದಿಸಲಾಗುತ್ತದೆ. ಹೊಸ ಮಾದರಿಯ ಟ್ಯಾಂಕ್, ಸದ್ಯ ಸೇನೆಯಲ್ಲಿ ಕಾರ್ಯವೆಸಗುತ್ತಿರುವ ಅರ್ಜುನ ಟ್ಯಾಂಕ್ ನ ಸುಧಾರಿತ ಆವೃತ್ತಿಯಾಗಿದೆ. ಅದರ ಗುಂಡು ಹಾರಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಜತೆಗೆ ಬಾಳಿ ಕೆ, ಚಲನಾ ಸಾಮರ್ಥ್ಯ ಸೇರಿದಂತೆ 72 ಹೊಸ ಅಂಶಗಳನ್ನು ಅದರಲ್ಲಿ ಸೇರ್ಪಡೆ ಮಾಡಲಾಗಿದೆ.
Related Articles
Advertisement