Advertisement
ಆ ಸಾಲಿಗೆ ಈಗ ಮತ್ತೊಂದು ಸೇರ್ಪಡೆಗೊಂಡಿದ್ದು, ವೊಡಾಫೋನ್ – ಐಡಿಯಾ ಅಥವಾ ವಿಐ (Vi) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ.
Related Articles
Advertisement
ಇದರಲ್ಲಿ ದಿನಕ್ಕೆ 3 ಜಿಬಿ ಡಾಟಾ ಸಿಗುತ್ತದೆ. 28 ದಿನಗಳ ಮಾನ್ಯತೆಯನ್ನು ಹೊಂದಿರುವ ಈ ರೀಚಾರ್ಜ್ ಪ್ಲ್ಯಾನ್ ಅನಿಯಮಿತ ಕರೆ. ದಿನಕ್ಕೆ 100 ಎಸ್ ಎಂ ಎಸ್ ಉಚಿತವಿದೆ. ಹಾಗೂ ವಿಐ ಮೂವಿಸ್ ಮತ್ತು ಟೀವಿ ನೋಡಬಹುದು. ಈ ಪ್ಲಾನ್ ಪ್ರಕಾರ ನಿಮಗೆ ದಿನಕ್ಕೆ 14.21 ರೂಪಾಯಿ ಖರ್ಚು ಮಾಡಬೇಕಾಗಿ ಬರುತ್ತದೆ.
ವೊಡಾಫೋನ್ – ಐಡಿಯಾ 401 ರೂಪಾಯಿ ಪ್ಲ್ಯಾನ್ ನ ವಿಶೇಷತೆಗಳೇನು..?
ವೊಡಾಫೋನ್ – ಐಡಿಯಾ ಈ ಪ್ಲಾನ್ ಕೂಡ 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಈ ರೀಚಾರ್ಜ್ ಪ್ಲ್ಯಾನ್ ನಲ್ಲಿ ಪ್ರತಿದಿನ 3 ಜಿಬಿ ಡಾಟಾ ಸಿಗುತ್ತದೆ. ಜೊತೆಗೆ 16 ಜಿಬಿ ಎಕ್ಸ್ಟ್ರಾ ಡಾಟಾ ಸಿಗುತ್ತದೆ. ಹಾಗೂ ದಿನಕ್ಕೆ 100 ಎಸ್ ಎಮ್ ಎಸ್ ಸಿಗುತ್ತದೆ. ಅನಿಯಮಿತ ಕರೆ ಕೂಡ ಇದೆ. ಮಾತ್ರವಲ್ಲದೇ, ಡಿಸ್ನಿ ಪ್ಲಸ್, ಹಾಟ್ ಸ್ಟಾರ್ , ವಿಐ ಮೂವಿಸ್ ನೋಡಬಹುದಾಗಿದ್ದು, ಈ ಪ್ಲಾನ್ ಗೆ ನೀವು ದಿನಕ್ಕೆ 14.31 ರೂ. ಖರ್ಚು ಮಾಡಬೇಕಾಗುತ್ತದೆ.
ವೊಡಾಫೋನ್ – ಐಡಿಯಾ 249 ರೂ. ಪ್ಲ್ಯಾನ್ ನ ವಿಶೇಷತೆಗಳೇನು..?
ವೊಡಾಫೋನ್ ಐಡಿಯಾ 249 ರೂ. ಪ್ಲಾನ್ ನಲ್ಲಿ ದಿನವೂ 1.5 ಜಿಬಿ ಡಾಟಾ ಸಿಗುತ್ತದೆ. ಇದಕ್ಕೆ ನೀವು ದಿನಕ್ಕೆ 8.89 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅನಿಯಮಿತ ಕರೆಯೊಂದಿಗೆ ಉಚಿತ ನೂರು ಎಸ್ ಎಮ್ ಎಸ್ ಒಳಗೊಂಡಿದ್ದು, 28 ದಿನಗಳ ಮಾನ್ಯತೆಯನ್ನು ಹೊಂದಿದೆ.
ಇದನ್ನೂ ಓದಿ : ವಿಡಿಯೋ ವೈರಲ್ : ಮದುವೆ ಸಮಾರಂಭದಲ್ಲಿಯೇ ಗುಂಡು ಹಾರಿಸಿದ ವಧು : FIR ದಾಖಲು