Advertisement

ಐದು ಟೆಲಿಕಾಂ ವಲಯದಲ್ಲಿ ಸ್ಪೆಕ್ಟ್ರಮ್ ನನ್ನು ಖರೀದಿಸಿದ ವೊಡಾಫೋನ್ ಐಡಿಯಾ..!

12:24 PM Mar 03, 2021 | |

ನವ ದೆಹಲಿ: ವೊಡಾಫೋನ್ ಐಡಿಯಾ ಲಿಮಿಟೆಡ್ 4 ಜಿ ವೈರ್‌ ಲೆಸ್ ಸೇವೆಗಾಗಿ ಹರಾಜಿನಲ್ಲಿ(auction) ಭಾರತದ ಐದು ಟೆಲಿಕಾಂ ವಲಯಗಳಲ್ಲಿ ಸ್ಪೆಕ್ಟ್ರಮ್ ನನ್ನು ಪಡೆದುಕೊಂಡಿದೆ ಎಂದು ಕಂಪನಿ ಮಂಗಳವಾರ(ಮಾ.2) ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಆದರೆ, ಕಂಪನಿಯು ಖರೀದಿಸಿದ ಸ್ಪೆಕ್ಟ್ರಮ್ ಪ್ರಮಾಣ ಅಥವಾ  ಆರ್ಥಿಕ ವಹಿವಾಟಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಕೆಲವು ವಲಯಗಳಲ್ಲಿ ಮತ್ತಷ್ಟು ದಕ್ಷತೆಯನ್ನು ಸೃಷ್ಟಿಸಲು ಸ್ಪೆಕ್ಟ್ರಮ್ ಹೋಲ್ಡಿಂಗ್ ನಂತರದ ವಿಲೀನವನ್ನು (ಆಗಸ್ಟ್ 2018 ರಲ್ಲಿ ವೊಡಾಫೋನ್ ಇಂಡಿಯಾ ಲಿಮಿಟೆಡ್ ಮತ್ತು ಐಡಿಯಾ ಸೆಲ್ಯುಲಾರ್ ಲಿಮಿಟೆಡ್) ಅತ್ಯುತ್ತಮವಾಗಿಸಲು ನಾವು ಈ ಅವಕಾಶವನ್ನು ಬಳಸಿದ್ದೇವೆ… ನಾವು 5 ವಲಯಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಸ್ಪೆಕ್ಟ್ರಮ್ ನಮ್ಮ 4 ಜಿ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ , ನಮ್ಮ ಗ್ರಾಹಕರಿಗೆ ಉತ್ತಮ ಡಿಜಿಟಲ್ ಅನುಭವವನ್ನು ನೀಡುತ್ತದೆ ”ಎಂದು ಕಂಪನಿ ತಿಳಿಸಿದೆ.

ಓದಿ : ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಸಚಿವರ ರಾಜೀನಾಮೆ ಪಡೆಯಲಿ: ಸಿದ್ದು ಆಗ್ರಹ

ಆಪರೇಟರ್‌ ಗಳು ತಂತ್ರಜ್ಞಾನವನ್ನು ವೇಗವಾಗಿ ಹೊರತರುವಂತೆ ಮಾಡಲು 5 ಜಿ ಸೇವೆಗಳಿಗೆ ನ್ಯಾಯಯುತ ಬೆಲೆಯಲ್ಲಿ ದೊಡ್ಡ ಪ್ರಮಾಣದ ಸ್ಪೆಕ್ಟ್ರಮ್ ಲಭ್ಯವಾಗಲಿದೆ ಎಂದು ಕಂಪನಿಯು ನಿರೀಕ್ಷಿಸಿದೆ ಎಂದು ವರದಿಯಾಗಿದೆ.

Advertisement

ಇನ್ನು, 5 ಜಿ ಪ್ರಯೋಗಗಳ ಕುರಿತು ಸರ್ಕಾರ ಶೀಘ್ರದಲ್ಲೇ ಪ್ರಕಟಣೆ ನೀಡಲಿದೆ ಎಂದು ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ತಿಳಿಸಿದ್ದಾರೆ.

ಆದಾಗ್ಯೂ, 3,300-3,600 ಮೆಗಾಹರ್ಟ್ಸ್ ಬ್ಯಾಂಡ್‌ ಗಳಲ್ಲಿ ಸ್ಪೆಕ್ಟ್ರಮ್ ಹರಾಜಿಗೆ ಅವರು ಟೈಮ್‌ ಲೈನ್ ನೀಡಲಿಲ್ಲ, ಇದನ್ನು 5 ಜಿ ಗಾಗಿ ಸೆಕ್ಟರ್ ರೆಗ್ಯುಲೇಟರ್ ನಿಗದಿಪಡಿಸಿದೆ. ಎರಡು ದಿನಗಳ ಹರಾಜು ಮಂಗಳವಾರ ಮುಕ್ತಾಯಗೊಂಡ ನಂತರ ವೊಡಾಫೋನ್ ಐಡಿಯಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ದೂರಸಂಪರ್ಕ ಇಲಾಖೆಯ (ಡಿಒಟಿ) ಅಧಿಕೃತ ಮಾಹಿತಿಯ ಪ್ರಕಾರ, ಟೆಲ್ಕೋಸ್ ಸೋಮವಾರ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನದಂದು, 77,146 ಕೋಟಿ ಮೌಲ್ಯದ ಬಿಡ್‌ ಗಳನ್ನು ಇಟ್ಟಿತ್ತು, ಇದು ಸರ್ಕಾರದ ಪ್ರಿ ಬಿಡ್ ಅಂದಾಜು, 45,000 ಕೋಟಿಗಿಂತ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಹಣವನ್ನು ಸಲ್ಲಿಸಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ವೊಡಾಫೋನ್ ಐಡಿಯಾ ಎಂಬ ಮೂರೂ ಟೆಲಿಕಾಂ ಆಪರೇಟರ್‌ಗಳು ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ಡಿಒಟಿ ತಿಳಿಸಿದೆ.

ಡಿಒಟಿ 2,308.8 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಹರಾಜಿನಲ್ಲಿ  3.92 ಟ್ರಿಲಿಯನ್ ಮೂಲ ಬೆಲೆಗೆ ಹಾಕಿತ್ತು. 700MHz, 800MHz, 900MHz, 1,800MHz, 2,100MHz, 2,300MHz, ಮತ್ತು 2,500MHz ಬ್ಯಾಂಡ್‌ ಗಳಲ್ಲಿನ ಸ್ಪೆಕ್ಟ್ರಮ್ ಅನ್ನು ಮಾರಾಟಕ್ಕೆ ಇಡಲಾಗಿದೆ ಎಂದು ವರದಿಯಾಗಿದೆ.

ಓದಿ :  ಮಸ್ಕ್ ಅವರ ಸ್ಟಾರ್ ಲಿಂಕ್  ಸ್ಯಾಟಲೈಟ್ ಇಂಟರ್ ನೆಟ್ ಸೇವೆ 2022ರಲ್ಲಿ ಭಾರತಕ್ಕೆ ಲಭ್ಯ..?!

Advertisement

Udayavani is now on Telegram. Click here to join our channel and stay updated with the latest news.

Next