Advertisement
ವೋಡಾಫೋನ್- ಭಾರ್ತಿ ಏರ್ ಟೆಲ್ ಶೇ.15ರಿಂದ 47ರಷ್ಟು ಏರಿಕೆ:
Related Articles
Advertisement
ಏರ್ ಟೆಲ್ ನ ಜನಪ್ರಿಯ 169 ರೂಪಾಯಿ ಹಾಗೂ 199 ರೂಪಾಯಿ ಪ್ಲ್ಯಾನ್ ಇನ್ಮುಂದೆ 248 ರೂಪಾಯಿ ಪ್ಯಾಕ್ ಆಗಲಿದೆ. ಏರ್ ಟೆಲ್ ನ ಹಿಂದಿನ 28 ದಿನಗಳ ಕಾಲದ ವ್ಯಾಲಿಡಿಟಿ ಈಗಲೂ ಮುಂದುವರಿಯಲಿದೆ. ಪರಿಷ್ಕೃತ ಬೆಲೆಯಲ್ಲಿ ಗ್ರಾಹಕರಿಗೆ 169 ರೂಪಾಯಿ ಪ್ಯಾಕ್ ನಲ್ಲಿ ದಿನಂಪ್ರತಿ 1.5ಜಿಬಿ ಡಾಟಾ ಪಡೆಯಲಿದ್ದಾರೆ. ಈ ಮೊದಲು ಪಡೆಯುತ್ತಿದ್ದುಕ್ಕಿಂತ ಶೇ.50ರಷ್ಟು ಹೆಚ್ಚಿನ ಸೇವೆ ಲಭ್ಯವಾಗಲಿದೆ. 199 ರೂ. ಪ್ಲ್ಯಾನ್ ಗ್ರಾಹಕರು ಈ ಮೊದಲಿನ ಸೇವೆ ಪಡೆಯಲಿದ್ದಾರೆ.
ಭಾರ್ತಿ ಏರ್ ಟೆಲ್ ಹೊರ ಹೋಗುವ ಕರೆ 28ದಿನಕ್ಕೆ 1000 ನಿಮಿಷ, 84 ದಿನ 3 ಸಾವಿರ ನಿಮಿಷ, 365 ದಿನ 12 ಸಾವಿರ ನಿಮಿಷ. ಹೀಗೆ ನಿಗದಿತ ನಿಮಿಷಗಳ ಮಿತಿ ಮೀರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಹೆಚ್ಚಿಗೆ ನೀಡಬೇಕಾಗುತ್ತದೆ ಎಂದು ಹೇಳಿದೆ.
ವೋಡಾಫೋನ್ ಕೂಡಾ ನೂತನ ಪ್ರೀಪೇಯ್ಡ್ ಮತ್ತು ಸರ್ವೀಸಸ್ ನ ವ್ಯಾಲಿಡಿಟಿ ಸಮಯವನ್ನು ನಿಗದಿಪಡಿಸಿದೆ. ಅದರಂತೆ 2 ದಿನ, 28 ದಿನ, 84 ದಿನ ಹಾಗೂ 365 ದಿನಗಳು ಎಂದು ಘೋಷಿಸಿದೆ. ವೋಡಾಫೋನ್ ಮತ್ತು ಭಾರ್ತಿಏರ್ ಟೆಲ್ ಈಗಾಗಲೇ ಭಾರೀ ದೊಡ್ಡ ಪ್ರಮಾಣದ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಇದೀಗ ದರ ಏರಿಕೆಗೆ ಮುಂದಾಗಿದೆ ಎಂದು ವರದಿ ವಿವರಿಸಿದೆ.
ಜಿಯೋ ಕರೆ, ಡೇಟಾ ದರ ಶೇ.40ರಷ್ಟು ಏರಿಕೆ:
ಜಿಯೋ ಕರೆಗಳ ದರ ಮತ್ತು ಡೇಟಾ ಬೆಲೆ ಶೇ.40ರಷ್ಟು ಏರಿಕೆಯಾಗಲಿದೆ. ಹೊಸ ಯೋಜನೆ ಅನ್ವಯ ಗ್ರಾಹಕರು ಶೇ.300ರಷ್ಟು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದು ರಿಲಯನ್ಸ್ ಹೇಳಿದೆ. ಆಲ್ ಇನ್ ಒನ್ ಪ್ಲ್ಯಾನ್ ನಡಿ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದೆ.
ಗ್ರಾಹಕ ಮೊದಲು ಎಂಬ ಧ್ಯೇಯ ನಮ್ಮದು ಹೀಗಾಗಿ ಜಿಯೋ ಗ್ರಾಹಕರು ಹೆಚ್ಚಿನ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಕರೆಗಳ ದರ ಎಷ್ಟು ಹೆಚ್ಚಾಗಲಿದೆ, ಡೇಟಾ ದರ ಎಷ್ಟು, ಅನ್ ಲಿಮಿಟೆಡ್ ಕರೆಗಳು, ವೈಸ್ ಸಂದೇಶ, ವಿಡಿಯೋ ಕರೆಗಳ ಪರಿಷ್ಕೃತ ದರದ ಬಗ್ಗೆ ಜಿಯೋ ಇನ್ನಷ್ಟೇ ನಿಖರವಾಗಿ ಘೋಷಿಸಬೇಕಾಗಿದೆ. ಸದ್ಯ ಶೇ.40ರಷ್ಟು ಎಂದು ಹೇಳಿದೆ. ಅದು ಯಾವ್ಯಾವ ಫ್ಲ್ಯಾನ್ ಗೆ ಎಷ್ಟೆಷ್ಟು ಎಂಬುದು ಡಿಸೆಂಬರ್ 3ರಂದು ಬಹಿರಂಗವಾಗಬಹುದು.