ಮಾಸ್ಕೊ: ಉಕ್ರೇನ್ ಮೇಲೆ ಯುದ್ಧ ನಡೆಸಿ ಆರ್ಥಿಕವಾಗಿ ಹಣ್ಣಾಗಿರುವ ರಷ್ಯಾ ಈಗ ಭಾರತವನ್ನು ಬಾಯ್ತುಂಬ ಹೊಗಳುತ್ತಿದೆ.
ನ.4ರಂದು ನಡೆದ ರಷ್ಯಾ ಐಕ್ಯತಾದಿನದ ಅಂಗವಾಗಿ ಮಾತನಾಡಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದಲ್ಲಿ ಅಗಾಧ ಜನಸಂಖ್ಯೆಯಿದೆ, ಅದ್ಭುತ ಪ್ರತಿಭಾವಂತರಿದ್ದಾರೆ, ಅವರೆಲ್ಲ ಉತ್ಸಾಹದಿಂದ ತುಂಬಿ ತುಳುಕುತ್ತಿದ್ದಾರೆ ಎಂದಿದ್ದಾರೆ.
“ಈಗ ಭಾರತದತ್ತ ನೋಡೋಣ. ಅವರೆಲ್ಲ ತಮ್ಮ ದೇಶವನ್ನು ಆಂತರಿಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ತವಕದಲ್ಲಿದ್ದಾರೆ. ಇದು ಖಚಿತವಾಗಿ ಅದ್ಭುತ ಫಲಿತಾಂಶ ನೀಡುತ್ತದೆ.
ಅಭಿವೃದ್ಧಿಯ ವಿಚಾರದಲ್ಲಂತೂ ಭಾರತ ಮಹತ್ತರ ಪ್ರಗತಿ ಸಾಧಿಸಲಿದೆ. ಆ ಬಗ್ಗೆ ಅನುಮಾನವೇ ಬೇಡ. ಎಲ್ಲಕ್ಕಿಂತ ವಿಶೇಷವೆಂದರೆ ಆ ದೇಶದಲ್ಲಿ ಹತ್ತಿರಹತ್ತಿರ 150 ಕೋಟಿ ಜನರಿದ್ದಾರೆ. ಇದೇ ಒಂದು ದೊಡ್ಡ ಶಕ್ತಿ’ ಎಂದು ಪುಟಿನ್ ಹೊಗಳಿದ್ದಾರೆ.