Advertisement

48 ಎಂಪಿ ಎಐ ಟ್ರಿಪಲ್ ಕ್ಯಾಮೆರಾದೊಂದಿಗೆ ವೀವೊ ವೈ 31 ಮಾರುಕಟ್ಟೆಯಲ್ಲಿ ಲಭ್ಯ

02:27 PM Jan 25, 2021 | Team Udayavani |

ನವ ದೆಹಲಿ : ವೀವೊ  ತನ್ನ ಯೂತ್ ಫುಲ್  ವೈ ಸೀರೀಸ್ ವೈ 31 ನ್ನು 6 ಜಿಬಿ ರ್ಯಾಮ್ + 128 ಜಿಬಿ ರ್ಯಾಮ್ ಗೆ ಪರಿವರ್ತಿಸುವುದರ ಮೂಲಕ 16,490 ರೂ.ಗೆ ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ವಿವೋ ಇಂಡಿಯಾ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ ರೇಸಿಂಗ್ ಬ್ಲ್ಯಾಕ್ ಮತ್ತು ನೀಲಿ ಆಕರ್ಷಕ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದೆ.

ವೀವೊ ಎಂದಿಗೂ ‘ಮೇಕ್ ಇನ್ ಇಂಡಿಯಾ’ಕ್ಕೆ ಬದ್ಧವಾಗಿದೆ. ವೀವೋ ಸ್ಮಾರ್ಟ್ ಫೋನ್ ನ ಎಲ್ಲಾ ಸಾಧನಗಳು ತಯಾರಾಗುವ  ಗ್ರೇಟರ್ ನೋಯ್ಡಾ ಫೆಸಿಲಿಟಿಯಲ್ಲಿ ವೈ 31 ನ್ನು ಕೂಡ ತಯಾರಿಸಲಾಗುತ್ತದೆ “ಎಂದು ಕಂಪನಿ ಹೇಳಿಕೊಂಡಿದೆ.

ಸ್ಮಾರ್ಟ್ ಫೋನ್ ಫೋಟೋ ಸಂಸ್ಕರಣಾ ವಿಶೇಷತೆಯೊಂದಿಗೆ 48 ಎಂಪಿ ಎಐ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಈ ಆಕರ್ಷಕ ಸ್ಮಾರ್ಟ್ ಫೋನ್ ಒಳಗೊಂಡಿದೆ. ಅಷ್ಟಲ್ಲದೇ, 2 ಎಂಪಿ Bokeh ಕ್ಯಾಮೆರಾ ಮತ್ತು ಹಿಂದಿನ ಕ್ಯಾಮೆರಾಕ್ಕಾಗಿ ಸೂಪರ್ ನೈಟ್ ಮೋಡ್ ನ್ನು ಹೊಂದಿದೆ.

ಓದಿ : ‘ಲವ್‌ ಯೂ ರಚ್ಚು’ ಫ‌ಸ್ಟ್‌ ಲುಕ್‌ ಬಿಡುಗಡೆ

Advertisement

ಸ್ಮಾರ್ಟ್ ಫೋನ್ ನ ಹಿಂಭಾಗದ ಕ್ಯಾಮೆರಾದಲ್ಲಿ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (ಇಐಎಸ್) ತಂತ್ರಜ್ಞಾನವನ್ನು ಸಹ ಒಳಗೊಂಡಿದೆ, ಇದು ಪ್ರತ್ಯೇಕ ಫ್ರೇಮ್‌ಗಳನ್ನು ಕ್ರಾಪ್ ಮಾಡುತ್ತದೆ ಮತ್ತು ಜೋಡಿಸಲು ಸಹಾಯ ಮಾಡುತ್ತದೆ. ಇದು ಅಲ್ಟ್ರಾ ಸ್ಟೇಬಲ್ ವೀಡಿಯೊಗಳನ್ನು ತಲುಪಿಸುವ ಅನ್ ಸ್ಟೇಬಲ್ ಚಲನೆಗಳಿಗೆ ಸ್ವಯಂಚಾಲಿತವಾಗಿ ಸರಿಪಡಿಸುವ ಅಲ್ಗಾರಿದಮ್‌ ವೈಶಿಷ್ಟ್ಯದಿಂದ ಕೂಡಿದೆ. ಮಾತ್ರವಲ್ಲದೇ, ಮುಂಭಾಗದಲ್ಲಿ, ಸ್ಮಾರ್ಟ್ಫೋನ್ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ.

ಈ ಸ್ಮಾರ್ಟ್ ಫೋನ್ 6.58-ಇಂಚಿನ ಎಫ್ ಎಚ್ ಡಿ + (2408 ಎಕ್ಸ್ 1080) ರೆಸಲ್ಯೂಶನ್ ನೊಂದಿಗೆ 5000 ಎಮ್ಎಹೆಚ್ ಬ್ಯಾಟರಿಯನ್ನು ಒಳಗೊಂಡಿದೆ.

ಓದಿ : ಪರಾಕ್ರಮ್ ದಿವಸ್ ಕಾರ್ಯಕ್ರಮಕ್ಕೆ ಬಿಜೆಪಿಯವರಿಗೆ ಹೆಚ್ಚು ಆಹ್ವಾನ : ತೃಣಮೂಲ ಆರೋಪ

 

 

Advertisement

Udayavani is now on Telegram. Click here to join our channel and stay updated with the latest news.

Next