ವಿವೋ ಸಂಸ್ಥೆಯು ವೈ01 ಸ್ಮಾರ್ಟ್ಫೋನ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ.
Advertisement
6.51 ಇಂಚಿನ ಎಚ್ಡಿ ಡಿಸ್ಪ್ಲೇ ಹೊಂದಿರುವ ಈ ಫೋನು 8.28ಮಿ.ಮೀ.ನಷ್ಟು ತೆಳುವಾಗಿದೆ. 2ಜಿಬಿ RAM ಜತೆ 32ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಮೆಮೋರಿ ಕಾರ್ಡ್ ಬಳಸಿಕೊಂಡು ಇಂಟರ್ನಲ್ ಸ್ಟೋರೇಜ್ ಅನ್ನು 1ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
8ಎಂಪಿ ಪ್ರೈಮರಿ ಕ್ಯಾಮೆರಾದ ಜತೆ 5ಎಂಪಿ ಸೆಲ್ಫಿ ಕ್ಯಾಮೆರಾವಿದೆ. 5000ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದ್ದು, ವಿಶೇಷವಾಗಿ ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನೂ ಅಳವಡಿಸಲಾಗಿದೆ.
ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್ಫೋನಿನ ಬೆಲೆ 8,999 ರೂ.