Advertisement

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿವೋ ಸರಣಿ…ಏನಿದರ ವಿಶೇಷತೆ?

03:42 PM Mar 25, 2021 | Team Udayavani |

ನವದೆಹಲಿ: ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾಗಿರುವ ವಿವೋ ತನ್ನ ಬಹು ನಿರೀಕ್ಷೆಯ ಸ್ಮಾರ್ಟ್ ಪೋನ್ ಗಳಾದ ವಿವೊ X60, X60 pro, X60 pro+ ಗಳನ್ನು   ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇವುಗಳು ಒಂದಕ್ಕಿಂತಲೂ ಒಂದು ಹೊಸ ಹೊಸ ವಿನ್ಯಾಸದ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ತಲುಪಲು ತಯಾರಾಗಿವೆ.

Advertisement

ಈ ಸ್ಮಾರ್ಟ್ ಪೋನ್ ಗಳು ವಿಶ್ವದಾದ್ಯಂತ ಹಲವಾರು ವಿಧದ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಹೊಂದಲಿದ್ದು, ಇದೀಗ  ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲಿನ ಬಳಕೆದಾರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ಗುಣಮಟ್ಟದ ಕ್ಯಾಮರಾ ವಿನ್ಯಾಸಗಳಿಂದ ರೂಪುಗೊಂಡಿದೆ ಎನ್ನಲಾಗಿದೆ.

ವೈಶಿಷ್ಟ್ಯತೆಗಳು

ಈ ಮೂರು ವಿನ್ಯಾಸದ ಮೊಬೈಲ್ ಫೋನ್ ಗಳ ಕುರಿತಾದ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸೋರಿಕೆಯಾಗಿದ್ದು, ಸೋರಿಕೆಗೊಂಡ ಮಾಹಿತಿಯ ಅನ್ವಯ ವಿವೊ X 60 ಆವೃತ್ತಿಯ  ಸ್ಮಾರ್ಟ್ ಪೋನಿನ ಬೆಲೆ  39,990 ರೂ. ಗಳಿಂದ ಆರಂಭಗೊಳ್ಳಲಿದ್ದು, ಇದು 8 GB  RAM  ಮತ್ತು 128 GB ಸ್ಟೋರೇಜ್ ಸೌಲಭ‍್ಯ ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ 43,990 ರೂ. ಬೆಲೆಯ ಸ್ಮಾರ್ಟ್ ಪೋನ್  8 GB  RAM  ಮತ್ತು 156 GB ಸ್ಟೋರೇಜ್ ಸೌಲಭ್ಯಗಳನ್ನು  ಒಳಗೊಂಡಿರಲಿದ್ದು, ಈ ನಡುವೆ ವಿವೊ X 60 ಪ್ರೋ ಹಾಗೂ ವಿವೊ X 60 ಪ್ರೋ + ಸ್ಮಾರ್ಟ್ ಪೋನ್ ಗಳು 49,990 ಹಾಗೂ 69,990 ರೂಗಳಲ್ಲಿ ತನ್ನ ಬಳಕೆದಾರರನ್ನು ತಲುಪಲಿದೆ ಎನ್ನಲಾಗಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರೀ ಪ್ರವಾಹ : ಕೊಚ್ಚಿ ಹೋದ ಕಾರು!

Advertisement

ವಿವೊ X 60 ಹಾಗೂ  X60 pro ಈ ಎರಡು ಸ್ಮಾರ್ಟ್ ಪೋನ್ ಗಳು 6.5 ಇಂಚಿನ ಫುಲ್ HD+ ಡಿಸ್ ಪ್ಲೇ ಅನ್ನು ಒಳಗೊಂಡಿದ್ದು, ಕ್ವಾಲ್ಕಾಮ್ ಸ್ವಾಪ್ ಡ್ರಾಗನ್ 870 SoC  ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಇನ್ನು ಕ್ಯಾಮರಾ ಸೌಲಭ್ಯಗಳ ವಿಚಾರದಲ್ಲಿ ಈ ಸ್ಮಾರ್ಟ್ ಪೋನ್ ಗಳು 48 MP ಪ್ರಾಥಮಿಕ ಕ್ಯಾಮರಾವನ್ನು ಹಾಗೂ  13 MP  ಸೆಕೆಂಡರಿ ಕ್ಯಾಮರಾವನ್ನು ಒಳಗೊಂಡಿರಲಿದೆ. ಇದರ ಜೊತೆ ಜೊತೆಗೆ 32 MP  ಸೆಲ್ಫಿ ಕ್ಯಾಮರಾವನ್ನು ಇದು ಹೊಂದಿರಲಿದೆ.

ವಿವೊ X60 ಸ್ಮಾರ್ಟ್ ಪೋನಿನಲ್ಲಿ ಒಟ್ಟು 4,300 mAh ಬ್ಯಾಟರಿ ಸಾಮರ್ಥ್ಯ ಇರಲಿದ್ದು,  X60 pro 4,200 mAh ಬ್ಯಾಟರಿ ಸಾಮರ್ಥ್ಯ ಇರಲಿದೆ.

ವಿವೊ X 60 ಹಾಗೂ  X60 pro  ಗೆ ಹೋಲಿಸಿದರೆ ವಿವೊ X 60 Pro+ ಸ್ಮಾರ್ಟ್ ಪೋನಿನಲ್ಲಿ ಕೆಲವು ವಿಭಿನ್ನ ಸೌಲಭ್ಯಗಳನ್ನು ಕಾಣಬಹುದಾಗಿದ್ದು, , ಕ್ವಾಲ್ಕಾಮ್ ಸ್ವಾಪ್ ಡ್ರಾಗನ್ 888 ಅನ್ನು ಒಳಗೊಂಡಿರಲಿದೆ. ಇನ್ನು ಸ್ಟೋರೇಜ್ ನಲ್ಲಿ ಇದು 12 GB  RAM ಜೊತೆಗೆ 256 GB  ಸ್ಟೋರೇಜ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಕ್ಯಾಮರಾ ವಿಚಾರಕ್ಕೆ ಬಂದರೆ ವಿವೊ X 60 Pro+ ಸ್ಮಾರ್ಟ್ ಪೋನಿನಲ್ಲಿ 50 MP  ಪ್ರಾಥಮಿಕ ಕ್ಯಾಮರಾವನ್ನು ಒಳಗೊಂಡಿರಲಿದ್ದು, 48 MP  ಅಲ್ಟ್ರಾ ವೈಡ್ ಕ್ಯಾಮರಾವನ್ನು ಹೊಂದಿರಲಿದೆ. ಅಲ್ಲದೆ ಇದರಲ್ಲಿ 32 MP ಟೆಲಿ ಪೋಟೋ ಕ್ಯಾಮರಾ ಮತ್ತು 32 MP  ಸೆಲ್ಫಿ ಕ್ಯಾಮರಾವನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್ ಪೋನಿನಲ್ಲಿ ಒಟ್ಟು 4,200 mAh  ಬ್ಯಾಟರಿ ಇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next