Advertisement

ಶಾಲಾ ಸಂಸತ್‌ ಚುನಾವಣೆಯಲ್ಲೂ ವಿವಿಪ್ಯಾಟ್!

03:55 PM Jul 07, 2019 | Team Udayavani |

ಹಾನಗಲ್ಲ: ಸರಕಾರಿ ವಸತಿ ಶಾಲೆಯಲ್ಲಿ ವಿಭಿನ್ನ ರೀತಿಯಾಗಿ ಶಾಲಾ ಸಂಸತ್‌ ಚುನಾವಣೆ ನಡೆಯಿತು. ಹೊಸ ತಂತ್ರದ ಮೂಲಕ ವಸತಿ ಶಾಲೆಯ ಮಕ್ಕಳು ತಮ್ಮ ಶಾಲೆ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸ್ವಚ್ಛತಾ ಮಂತ್ರಿಯನ್ನು ಆಯ್ಕೆ ಮಾಡಿದರು.

Advertisement

ನವನಗರ ಸಮೀಪದ ಸಮಾಜ ಕಲ್ಯಾಣ ಇಲಾಖೆ ಸರಕಾರಿ ವಸತಿ ಶಾಲೆಯಲ್ಲಿ ನಡೆದ ಶಾಲಾ ಸಂಸತ್‌ ಚುನಾವಣೆಯಲ್ಲಿ ವಿವಿ ಪ್ಯಾಟ್‌ಗಳ ಮಾದರಿಯಲ್ಲಿ ಸ್ಮಾರ್ಟ್‌ ಪೋನ್‌ ಬಳಸಲಾಗಿತ್ತು. ಒಟ್ಟು ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 125 ವಿದ್ಯಾರ್ಥಿಗಳು(ಮತದಾರರು)ಸರತಿ ಸಾಲಿನಲ್ಲಿ ನಿಂತು ಸ್ಮಾರ್ಟ್‌ ಪೋನ್‌ಗಳನ್ನು ನೋಡಿ ತಮ್ಮ ಅಭ್ಯರ್ಥಿಗಳನ್ನು ಆಯ್ಕೆಮಾಡಿದರು.

ಮಧ್ಯಾಹ್ನ ಊಟದ ನಂತರ ನಡೆದ ಚುನಾವಣೆಯಲ್ಲಿ ಸಾಲುಗಟ್ಟಿ 1 ರಿಂದ‌ 5 ನೇ ತರಗತಿ ಶಾಲಾ ಮಕ್ಕಳು ತಮ್ಮ ಅಭ್ಯರ್ಥಿಗಳನ್ನು ಅವರ ಹೆಸರುಗಳ ಮುಂದೆ ಅವರ ಭಾವಚಿತ್ರ ನೋಡಿ ಮತ ಹಾಕುವ ಮೂಲಕ ಅಭ್ಯರ್ಥಿ ಆಯ್ಕೆ ಮಾಡಿದರು. ಈ ಚುನಾವಣೆಯಿಂದ ದೇಶದಲ್ಲಿ ಯಾವ ರೀತಿ ಚುನಾವಣೆ ನಡೆಯುತ್ತದೆ ಹಾಗೂ ಅವರ ಪಾಲಕರು ಯಾವ ರೀತಿ ಮತಗಳನ್ನು ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆಂಬ ಶಿಕ್ಷಣವನ್ನು ಮಕ್ಕಳಲ್ಲಿ ಜಾಗೃತಿ ಮೂಡಿಸುವ ವಿಭಿನ್ನ ಕಾರ್ಯಕ್ರಮ ಇದಾಗಿದೆ. ಭವಿಷ್ಯದ ನಾಗರಿಕರು ಹಾಗೂ ಉತ್ತಮ ನಾಯಕತ್ವ ಬೆಳೆಸುವಲ್ಲಿ ಶಾಲಾ ಸಂಸತ್‌ ಸಹಕಾರಿಯಾಗಿರಲಿದೆ ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ಹಾಗೂ ಚುನಾವಣೆ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದ ಜಿ.ಬಿ.ಹಿರೇಮಠ ಹೇಳಿದರು. ತಾಪಂ ಇಒ ಹಾಗೂ ಚುನಾವಣಾಧಿಕಾರಿ ಚನ್ನಬಸಪ್ಪ ಹಾವಣಗಿ, ಮತಗಟ್ಟೆ ಅಧೀಕ್ಷಕಿ ಎಚ್.ಡಿ. ಕವಿತಾ, ಸಂತೋಷ ಹೊಂಕಣ, ಸೆಕ್ಟರ್‌ ಆಫೀಸರ್‌ ಬಿ. ಭೀಮಪ್ಪಾ, ಪಿಆರ್‌ಒ ಬಿ.ಜಿ.ಪರಮೇಶಿ, ಇವಿಎಂ ಆಪರೇಟರ್‌ ಆಗಿ ಮಂಜುನಾಥ ಪಾಣಿಯವರ ಹಾಗೂ ದಿಲೀಪ್‌ ಚಿನ್ನಣ್ಣನವರ ಚುನಾವಣೆ ಕರ್ತವ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next