Advertisement

ರುಸ್ತುಂ ಸೆಟ್‌ನಲ್ಲಿ ವಿವೇಕ್‌ ಒಬೆರಾಯ್‌

11:28 AM Aug 11, 2018 | Team Udayavani |

ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಸಿನಿಮಾದಲ್ಲಿ ವಿವೇಕ್‌ ಒಬೆರಾಯ್‌ ನಟಿಸುತ್ತಾರೆಂಬ ಸುದ್ದಿಯನ್ನು ನೀವು ಈ ಹಿಂದೆಯೇ ಓದಿದ್ದೀರಿ. ಈಗ ವಿವೇಕ್‌ ಒಬೆರಾಯ್‌ “ರುಸ್ತುಂ’ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಚಿತ್ರೀಕರಣದಲ್ಲಿ ವಿವೇಕ್‌ ಭಾಗಿಯಾಗಿದ್ದು, ಅವರಿಲ್ಲಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

“ರುಸ್ತುಂ’ ತಂಡದೊಂದಿಗೆ ಕೆಲಸ ಮಾಡಿದ ಖುಷಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ವಿವೇಕ್‌, “ರವಿವರ್ಮ ಅವರ “ರುಸ್ತುಂ’ನಲ್ಲಿ ಕೆಲಸ ಮಾಡಿರೋದು ಒಳ್ಳೆಯ ಅನುಭವ. ನನ್ನದು ಗೆಸ್ಟ್‌ ಅಪಿಯರೆನ್ಸ್‌ ಆದರೂ ಪಾತ್ರ ಮಾತ್ರ ತುಂಬಾ ಚೆನ್ನಾಗಿದೆ. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ನಾನು ಶಿವಣ್ಣ ಅವರನ್ನು ನೋಡಿಕೊಂಡೆ ಬೆಳೆದವನು.

ಈಗ ಅಂತಹ ಲೆಜೆಂಡ್‌, ಸೆಂಚುರಿ ಸ್ಟಾರ್‌ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ’ ಎಂದು ಟ್ವೀಟ್‌ ಮಾಡಿದ್ದಾರೆ. “ರುಸ್ತುಂ’ ಚಿತ್ರವನ್ನು ರವಿವರ್ಮ ನಿರ್ದೇಶಿಸುತ್ತಿದ್ದು, ಜಯಣ್ಣ ಕಂಬೈನ್ಸ್‌ನಡಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌, ಮಯೂರಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next