Advertisement
2018-19ನೇ ಸಾಲಿನಲ್ಲಿ ಎಲ್‌ಕೆಜಿಗೆ 98, ಯುಕೆಜಿಗೆ 95 ಮತ್ತು 1ನೇ ತರಗತಿಗೆ ಕನ್ನಡ ಮಾಧ್ಯಮ ಶಿಕ್ಷಣಕ್ಕೆ 121 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. 2019-20ನೇ ಸಾಲಿನಲ್ಲಿ ಸರಕಾರದ ಅನುಮತಿಯೊಂದಿಗೆ ಆರಂಭಿಸಿದ ಬಳಿಕ ಎಲ್‌ಕೆಜಿಗೆ 146 ವಿದ್ಯಾರ್ಥಿಗಳು, 1ನೇ ತರಗತಿಗೆ ಕನ್ನಡ ಮಾಧ್ಯಮ ಶಿಕ್ಷಣಕ್ಕೆ 59 ಮತ್ತು 1ನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ 121 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬೆಳಗಿನ ಉಪಾಹಾರ, ಹಾಲು, ಬಿಸಿಯೂಟ ಸರಕಾರದಿಂದ ಸಿಗುವ ಎಲ್ಲವೂ ಸಿಗುತ್ತದೆ. ಕಳೆದ ವರ್ಷವೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೂ ಇದನ್ನು ನೀಡಲಾಗಿದೆ. 1ರಿಂದ 8ನೇ ತರಗತಿ ವರೆಗೂ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಆಂಗ್ಲ ಮಾಧ್ಯಮದಲ್ಲಿ ಪ್ರೌಢಶಾಲೆಯನ್ನು 9, 10ರ ವರೆಗೆ ಮುಂದುವರಿಸಬೇಕೆಂಬ ಆಶಯ ವಿದ್ದರೂ ಸರಕಾರ ಅನುಮತಿ ನೀಡಲಿಲ್ಲ.