Advertisement

ವಿಟ್ಲ : ಲಾರಿ ಢಿಕ್ಕಿ ಹೊಡೆದು ರಿಕ್ಷಾ ಚಾಲಕನಿಗೆ ಗಂಭೀರ ಗಾಯ, ಹೆದ್ದಾರಿ ಸಂಚಾರ ಅಸ್ತವ್ಯಸ್ತ

04:28 PM Jul 23, 2022 | Team Udayavani |

ವಿಟ್ಲ : ಆಟೋ ರಿಕ್ಷಾಕ್ಕೆ ಹಿಂದಿನಿಂದ ಬಂದ ಲಾರಿವೊಂದು ಢಿಕ್ಕಿ ಹೊಡೆದ ಘಟನೆ ಜು.23 ರಂದು ಮಾಣಿ ಸಮೀಪದ ಸೂರಿಕುಮೇರು ರಾಜ್ ಕಮಲ್ ಸಭಾಭವನ ಬಳಿ ನಡೆದಿದೆ.

Advertisement

ಮಂಗಳೂರು ಮೂಲದ ಆಟೋ ರಿಕ್ಷಾವೊಂದು ಮಾಣಿಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದಿದ್ದು, ಅಪಘಾತದಿಂದಾಗಿ ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಢಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಕೆಲ ಕಾಲ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.

ಇದನ್ನೂ ಓದಿ : ದಿ.ಚಂದು ಬಾಬು‌ ಪ್ರಶಸ್ತಿ ಪ್ರದಾನ: ಶಿರಸಿಯಲ್ಲಿ ಎಂಟು ದಿನ ‘ಶ್ರೀಕೃಷ್ಣಾಷ್ಟಕ’ ತಾಳಮದ್ದಲೆ

Advertisement

Udayavani is now on Telegram. Click here to join our channel and stay updated with the latest news.

Next