Advertisement
ಚುನಾವಣೆಯಲ್ಲಿ 12 ಬಿಜೆಪಿ, 5 ಕಾಂಗ್ರೆಸ್ ಮತ್ತು ಎಸ್‌ಡಿಪಿಐ 1 ಸ್ಥಾನ ಗಳಲ್ಲಿ ಜಯ ಗಳಿಸಿದ್ದು, ಬಿಜೆಪಿಗೆ ಅಧಿಕಾರ ನಡೆಸುವ ಯೋಗ ಸತತ ಎರಡನೇ ಬಾರಿ ಲಭಿಸಿದೆ. ಕಾಂಗ್ರೆಸ್ ಕಳೆದ ಅವಧಿಯಲ್ಲಿದ್ದ ಒಂದು ಸ್ಥಾನ ಕಳೆದುಕೊಂಡು 5 ಸ್ಥಾನಕ್ಕೆ ಕುಸಿದರೆ, ಎಸ್ ಡಿಪಿಐ ಖಾತೆ ತೆರೆದಿದೆ. 8ನೇ ವಾರ್ಡ್‌ನಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ ಕೊನೆಗೆ ಬಿಜೆಪಿ ಮತ್ತು ಎಸ್‌ಡಿಪಿಐ ನಡುವೆ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. 18ನೇ ವಾರ್ಡ್ ನಲ್ಲಿ ತ್ರಿಕೋನ ಸ್ಪರ್ಧೆಯಿದ್ದರೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವೆ ಪೈಪೋಟಿ ನಡೆದಿತ್ತು. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. 11ನೇ ವಾರ್ಡ್‌ನ ಅಭ್ಯರ್ಥಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಾನ್ ಡಿ’ಸೋಜಾ ಕೇವಲ 15 ಮತಗಳನ್ನು ಪಡೆದುಕೊಂಡಿದ್ದು 18 ವಾರ್ಡ್‌ಗಳಲ್ಲಿ ಓರ್ವ ಅಭ್ಯರ್ಥಿ ಕನಿಷ್ಠ ಮತ ಪಡೆದವರೆಂದು ಪರಿಗಣಿಸಲಾಗಿದೆ.
ರಾಜ್ಯದ ಎಲ್ಲ ಪ. ಪಂ.ಚುನಾವಣೆ ನಡೆದಿದ್ದು, ಮೀಸಲಾತಿ ಪಟ್ಟಿ ಮಾಡಬೇಕಾಗಿದೆ. ಇದರಿಂದ ತಡವಾಗಿರಬಹುದು. ಈ ತಿಂಗಳ ಕೊನೆಯೊಳಗೆ ಮೀಸಲಾತಿ ಪಟ್ಟಿ ಬಿಡುಗಡೆಯಾಗಬಹುದು ಎಂದು ಅಧಿಕೃತವಾಗಿ ತಿಳಿದು ಬಂದಿದೆ.
Related Articles
Advertisement
ಮೀಸಲಾತಿ ಪಟ್ಟಿ ಬಂದಿಲ್ಲಪ. ಪಂ.ಗೆ ಆಯ್ಕೆಯಾಗಿ 2ತಿಂಗಳು ಆಗುತ್ತಿದೆ. ಇನ್ನೂ ಮೀಸಲಾತಿ ಪಟ್ಟಿ ಬಂದಿಲ್ಲ. ನಮ್ಮನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕಚೇರಿಗೆ ನಾವು ಹೋಗುತ್ತೇವೆ. ಆದರೆ ಆಡಳಿತ ವ್ಯವಸ್ಥೆ ಸುಸೂತ್ರವಾಗಿರದೇ ಇದ್ದಾಗ ನಾವೆಣಿಸಿದಂತೆ ಕಾರ್ಯಗಳನ್ನು ವೇಗವಾಗಿ ಪರಿಹರಿಸಲಾಗುತ್ತಿಲ್ಲ. ಮುಖ್ಯಾಧಿಕಾರಿ ಬಿಟ್ಟರೆ ಸಿಬಂದಿಗಳೂ ಇಲ್ಲ. ಕಂದಾಯ ಅಧಿಕಾರಿ, ಎಂಜಿನಿಯರ್ ಇತ್ಯಾದಿ ಹುದ್ದೆಗಳನ್ನು ಭರ್ತಿ ಮಾಡದೇ ಇದ್ದಲ್ಲಿ ಈ ಸಮಸ್ಯೆ ಪರಿಹರಿಸಲು ಕಷ್ಟವಾಗುತ್ತದೆ. – ಅಬ್ದುಲ್ ರಹಿಮಾನ್, ಸದಸ್ಯರು, ವಿಟ್ಲ ಪ.ಪಂ.