Advertisement

ವಿಟ್ಲ: ಕಾರಣಿಕ ಕ್ಷೇತ್ರ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಕಳವು

09:46 AM Nov 09, 2022 | Team Udayavani |

ವಿಟ್ಲ: ಕಾರಣಿಕ ಕ್ಷೇತ್ರಗಳಲ್ಲೊಂದಾದ ವೀರಕಂಬ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ, ವಿಟ್ಲ ಕಲ್ಲಡ್ಕ ರಸ್ತೆ ಬದಿಯಲ್ಲಿರುವ ಕಾಣಿಕೆ ಡಬ್ಬಿಯನ್ನು ಯಾರೋ ಖದೀಮರು ಮಂಗಳವಾರ ರಾತ್ರಿ ಎಗರಿಸಿದ್ದಾರೆ.

Advertisement

ಕೆಲಿಂಜ ಕ್ಷೇತ್ರಕ್ಕೆ ಬಹಳ ಪುರಾತನ ಇತಿಹಾಸವಿದ್ದು ಇಲ್ಲಿ ವರ್ಷಂಪ್ರತಿ ನಡೆಯುವ ಮೆಚ್ಚಿ ಜಾತ್ರೆ ವಿಶೇಷವಾಗಿದೆ. ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಮೆಚ್ಚಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಈ ಮಾರ್ಗದಿಂದ ಹಾದು ಹೋಗುವ ಅನೇಕ ಭಕ್ತರು ಕ್ಷೇತ್ರದ ಎದುರು ತಮ್ಮ ವಾಹನವನ್ನು ನಿಲ್ಲಿಸಿ ಕಾಣಿಕೆ ಹಾಕಿ ಹೋಗುತ್ತಾರೆ. ನಿನ್ನೆ ರಾತ್ರಿ ಯಾರೋ ಖದೀಮರು ಕಾಣಿಕೆ ಹುಂಡಿಯನ್ನು ಎಗರಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ : ನೆಟ್ ವರ್ಕ್ ಸಮಸ್ಯೆ: ಬೆಟ್ಟದ ತುದಿಯಲ್ಲಿ ಅಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ

Advertisement

Udayavani is now on Telegram. Click here to join our channel and stay updated with the latest news.

Next