Advertisement

ವಿಟ್ಲ: ಕಣಜದ ಹುಳಗಳಿಂದ ದಾಳಿಗೊಳಗಾಗಿದ್ದ ವ್ಯಕ್ತಿ ಮೃತ್ಯು

11:01 AM Aug 09, 2022 | Team Udayavani |

ವಿಟ್ಲ: ಕಣಜದ ಹುಳಗಳು ದಾಳಿ ನಡೆಸಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮೃತರನ್ನು ಮಾಣಿಲ ಗ್ರಾಮದ ಪಕಳಕುಂಜ ನಿವಾಸಿ ಶ್ರೀಕೃಷ್ಣ ನಾಯಕ್ (50) ಎಂದು ಗುರುತಿಸಲಾಗಿದೆ.

ಕೃಷ್ಣ ಅವರ ಮೇಲೆ ಸೋಮವಾರ ಸಂಜೆ ವೇಳೆ ಪೆರುವಾಯಿ ಸಮೀಪ ಕಣಜದ ಹುಳಗಳು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೃಷ್ಣ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಪತ್ನಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next