ವಿಟ್ಲ: ಸಹಕಾರಿ ಸಂಸ್ಥೆಯ ಸಾಲ ಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಡ್ಕಿದುವಿನಲ್ಲಿ ಮಾ.16ರಂದು ನಡೆದಿದೆ.
Advertisement
ಇಡ್ಕಿದು ಬಂಗೇರಕೋಡಿ ನಿವಾಸಿ ವೀರಪ್ಪ ಗೌಡ (55) ಮೃತ ವ್ಯಕ್ತಿ.
ಸಹಕಾರಿ ಸಂಘದಿಂದ ಸಾಲವನ್ನು ತೆಗೆದುಕೊಂಡಿದ್ದು, ಸಾಲವನ್ನು ಮರುಪಾವತಿಸುವಂತೆ ನೋಟೀಸ್ ಬಂದಿರುವುದರಿಂದ ಮಾನಸಿಕವಾಗಿ ನೊಂದು ಮನೆಯ ಪಕ್ಕದ ಜಾಗದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪುತ್ರ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.