Advertisement

ವಿಟ್ಲಪಡ್ನೂರು : ಜಾಗದ ವಿಚಾರದಲ್ಲಿ ಜಗಳ, ಸಹೋದರನ ಕೊಲೆಯಲ್ಲಿ ಅಂತ್ಯ

11:08 AM Sep 14, 2022 | Team Udayavani |

ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಜಗಳ ಕೊಲೆಯ ಮೂಲಕ ಅಂತ್ಯ ಕಂಡ ಘಟನೆ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಬನಾರಿಯಲ್ಲಿ ಸಂಭವಿಸಿದೆ.

Advertisement

ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಅವರನ್ನು ಸಹೋದರ ಪದ್ಮನಾಭ (49) ಕೊಲೆಗೈದಿದ್ದಾನೆ. ಕುಡಿದು ಮನೆಯಲ್ಲಿ ಆಗಾಗ ಗಲಾಟೆ ಸಂಭವಿಸುತ್ತಿದ್ದು, ಒಂದು ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಗಲಾಟೆ ನಡೆದಿದೆ ಎನ್ನಲಾಗಿದ್ದು, ಬುಧವಾರ ವಿಟ್ಲ ಠಾಣೆಗೆ ದೂರು ಬಂದಿದೆ.

ಇದನ್ನೂ ಓದಿ : ಮೈಸೂರು: ದಸರಾ ಉತ್ಸವಕ್ಕೆ ಆಗಮಿಸಿ ಮುದ್ದಾದ ಗಂಡು ಮರಿಗೆ ಜನ್ಮ ನೀಡಿದ ಆನೆ ಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next